ಸ್ಟೇಡಿಯಂನಲ್ಲಿ ಸಿಟ್ಟಾಗಿದ್ದೇಕೆ ವಿರಾಟ್​ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ? ವಿಡಿಯೋ ವೈರಲ್​

Anushka Sharma
Published on

ನ್ಯೂಯಾರ್ಕ್​: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಟೀಮ್ ಇಂಡಿಯಾ ಸ್ಟಾರ್​ ಬ್ಯಾಟ್ಸ್​ಮನ್​​ ವಿರಾಟ್​ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸಿಟ್ಟಿಗೆದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ಗೆದ್ದರು ಕೂಡ ಬಹುನಿರೀಕ್ಷಿತ ಪಂದ್ಯ ನಿರಾಸೆಯಲ್ಲಿ ಅಂತ್ಯಗೊಂಡಿತು. ಏಕೆಂದರೆ, ಭಾರತ ತಂಡ ಕೇವಲ 119 ರನ್ ಗಳಿಸಿದರೆ, ಪಾಕಿಸ್ತಾನ ತಂಡ ಕೇವಲ 113 ರನ್ ಸೇರಿಸಲು ಶಕ್ತವಾಯಿತು. ಇಲ್ಲಿದೆ ಯಾವುದೇ ಪೈಪೋಟಿ ಇರಲಿಲ್ಲ ಮತ್ತು ಥ್ರಿಲ್​ ಕೂಡ ಇರಲಿಲ್ಲ. ಟಿ20 ಪಂದ್ಯಗಳೆಂದರೆ ಅಲ್ಲಿ ಬೌಂಡರಿ-ಸಿಕ್ಸರ್​ಗಳ ಸುರಿಮಳೆ ಇರಬೇಕು. ಆದರೆ, ಅತಿಥೇಯ ಅಮೆರಿಕದಲ್ಲಿ ಇದ್ಯಾವುದು ಕಾಣಲಿಲ್ಲ.

ಪಾಕ್​ ವಿರುದ್ಧ ಭಾರತ 6 ರನ್‌ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 4 ರನ್‌ಗಳಿಗೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಇದಾದ ಬಳಿಕ ಯುಎಸ್ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗುವ ಮೂಲಕ ಮತ್ತೊಮ್ಮೆ ಅಭಿಮಾನಿಗಳಿಗೆ ಕೊಹ್ಲಿ ಶಾಕ್ ನೀಡಿದರು.

ಸತತ ವೈಫಲ್ಯ ಹಿನ್ನೆಲೆಯಲ್ಲಿ ಕೊಹ್ಲಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆಯೇ ಕೊಹ್ಲಿ ಪತ್ನಿ ಅನುಷ್ಕಾ ಕೋಪ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗುತ್ತಿದೆ. ನ್ಯೂಯಾರ್ಕ್​ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ವೇಳೆ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.

ಅನುಷ್ಕಾ ಶರ್ಮಾ ಅವರು ಯಾಕೆ ಕೋಪಗೊಂಡರು ಎಂಬುದು ಇನ್ನೂ ತಿಳಿದುಬಂದಿಲ್ಲವಾದರೂ, ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net