

ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ ನಡು ರಸ್ತೆಯಲ್ಲಿ ಬೆದರಿಕೆ ಹಾಕಿ ಗೂಂಡಾಗಿರಿ ಪ್ರದರ್ಶಿಸಿರುವುದು ಬಿಜೆಪಿಯ ಮನಸ್ಥಿತಿಯನ್ನು ಎತ್ತಿ ತೋರುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಅಶೋಕ್ ಅವರೇ, ವಿಪಕ್ಷ ನಾಯಕರಾದ ಕೂಡಲೇ ನೀವೇನು ಸರ್ವಾಧಿಕಾರಿಯೇ? ಸಾಂವಿಧಾನಿಕ ಕಾನೂನು ಉಲ್ಲಂಘನೆ ಮಾಡಿ ಏನು ಬೇಕಾದರೂ ದುರ್ವರ್ತನೆ ತೋರಬಹುದೇ? ಎಂದು ಪ್ರಶ್ನಿಸಿದೆ.
ಬಿಜೆಪಿಗರೇ, ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ನಿಮ್ಮ ತಾಯಿಯು ಹೆಣ್ಣು, ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸಂಸಾರ ನಿಭಾಯಿಸುವ ನಿಮ್ಮ ಹೆಂಡತಿಯೂ ಕೂಡ ಹೆಣ್ಣು. ಮಹಿಳೆಯರ ಬಗ್ಗೆ ಪದೇ ಪದೇ ಹೊಲಸು ನಾಲಿಗೆ ಹರಿಬಿಡುವ ನೀವುಗಳು ರಾಜ್ಯದ ಮಹಿಳೆಯರ ಮುಂದೆ ಮಂಡಿಯೂರಿ ಕ್ಷಮೆ ಕೇಳಬೇಕಿದೆ ಎಂದು ಆಗ್ರಹಿಸಿದೆ.