ಪಾಂಡ್ಯ ಸಹೋದರರ ಜತೆ ಧೋನಿ ಬರ್ತ್ ಡೇ ಸೆಲೆಬ್ರೇಷನ್​ ಫೋಟೋ ರಿಲೀಸ್​ ಮಾಡಿದ ಸಾಕ್ಷಿ

dhoni and pandya for web
Published on

ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ, ಇದೇ ತಿಂಗಳ (ಜುಲೈ 7) ಆರಂಭದಲ್ಲಿ 39ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಧೋನಿಗೆ ಸರ್ ಪ್ರೈಸ್ ಕೊಡುವ ಸಲುವಾಗಿ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್​ ಪಾಂಡ್ಯ ಸಹೋದರರು ಗುಜರಾತ್​ನಿಂದ ರಾಂಚಿಗೆ ಆಗಮಿಸಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು.ಇದು ಸ್ವತಃ ಧೋನಿ ಸೇರಿದಂತೆ ಎಲ್ಲರಿಗೂ ಆಶ್ಚರ್ಯ ಕೂಡ ಆಗಿತ್ತು. ಪಾಂಡ್ಯ ಸಹೋದರರೊಂದಿಗೆ ಧೋನಿ ಹುಟ್ಟುಹಬ್ಬ ಆಚರಿಸಿದ ಫೋಟೋವನ್ನು ಸಾಕ್ಷಿ ಸಿಂಗ್​ ಇನ್​ಸ್ಟಾಗ್ರಾಂನಲ್ಲಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ಮಿಸ್ಸಿಂಗ್​ ದ ಹ್ಯಾಪಿ ಸ್ಕ್ವಾಡ್ ಎಂದು ಬರೆದು ಸಾಕ್ಷಿ ಫೋಟೋ ಪ್ರಕಟಿಸಿದ ಬೆನ್ನಲ್ಲೇ ಮಿಸ್​ ಯೂ ಗಾಯ್ಸ್​ ಎಂದು ಹಾರ್ದಿಕ್ ​ ಪಾಂಡ್ಯ ಕೂಡ ಫೋಟೋ ಶೇರ್​ ಮಾಡಿದ್ದಾರೆ. ಕೃನಾಲ್​ ಪಾಂಡ್ಯ ಪತ್ನಿ ಪಂಖುರಿ, ಧೋನಿ ಅವರ ಕೆಲ ಸ್ನೇಹಿತರು ಚಿತ್ರದಲ್ಲಿ ನಿಂತಿದ್ದಾರೆ. ಹಾರ್ದಿಕ್ ಪಾಂಡ್ಯ ಖುಷನ್​ನಲ್ಲಿ ಕುಳಿತಿದ್ದರೆ, ಎಲ್ಲರ ಹಿಂದೆ ನಿಂತಿರುವ ಧೋನಿ, ತಮ್ಮ ನಗು ಮುಖದೊಂದಿಗೆ ಫೋಟೋ ಪೋಸ್​ ನೀಡಿದ್ದಾರೆ. ಸಾಕ್ಷಿ ಪ್ರಕಟಿಸಿದ ಫೋಟೋಗೆ ಸಾವಿರಾರು ಮಂದಿ ಪ್ರಕ್ರಿಯಿಸಿದ್ದಾರೆ.

ಧೋನಿ ಹುಟ್ಟುಹಬ್ಬಕ್ಕೆ ಭಾರತ ಹಾಲಿ, ಮಾಜಿ ಕ್ರಿಕೆಟಿಗರಲ್ಲದೇ, ವಿಶ್ವಕ್ರಿಕೆಟ್​ನ ಹಲವು ಮಂದಿಗೆ ಶುಭಾಶಯ ಕೋರಿದ್ದರು. ಅಲ್ಲದೆ, ಸಿಎಸ್​ಕೆ ತಂಡದ ಆಲ್ರೌಂಡರ್​ ಡ್ವೇನ್​ ಬ್ರಾವೊ ಹೆಲಿಕಾಪ್ಟರ್​ ಹೆಸರಿನಲ್ಲಿ ಆಲ್ಬಂ ತಯಾರಿಸಿದ್ದರು. 2019ರ ಏಕದಿನ ವಿಶ್ವಕಪ್​ ಟೂನಿರ್ಯಲ್ಲಿ ನ್ಯೂಜಿಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದ ಬಳಿಕ ಧೋನಿ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net