

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದರೂ ಧೋನಿ ಕ್ರೇಜ್ ಕಳೆದುಕೊಂಡಿಲ್ಲ. ಧೋನಿ ಎಲ್ಲಿ ಕಂಡರೂ ಅಭಿಮಾನಿಗಳು ಸೆಲ್ಫಿಗಾಗಿ ಪೈಪೋಟಿ ನಡೆಸುತ್ತಾರೆ.
ಇತ್ತೀಚೆಗೆ, ರಾಂಚಿಯಲ್ಲಿ ಧೋನಿ ತಮ್ಮ ಹೋಂಡಾ ರೆಪ್ಸೋಲ್ 150 (ಬೈಕ್) ಸವಾರಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧೋನಿಗೆ ಬೈಕ್ ಮತ್ತು ಕಾರು ಎಂದರೆ ತುಂಬಾ ಇಷ್ಟ. ಧೋನಿಯ ಗ್ಯಾರೇಜ್‌ನಲ್ಲಿ ಹತ್ತಾರು ಬೈಕ್‌ಗಳು ಮತ್ತು ಕಾರುಗಳು ಕಾಣಸಿಗುತ್ತವೆ. ಧೋನಿ ಅವರು ಬೈಕ್ ಓಡಿಸಲು ಇಷ್ಟಪಡುತ್ತಾರೆ ಎಂದು ಹಲವು ಬಾರಿ ಬಹಿರಂಗಪಡಿಸಿದ್ದಾರೆ.
ಸದ್ಯ ರಾಂಚಿಯಲ್ಲಿ ತಂಗಿರುವ ಧೋನಿ ಬೈಕ್ ನಲ್ಲಿ ರಾಂಚಿಯಲ್ಲಿರುವ ತಮ್ಮ ಮನೆಗೆ ತಲುಪಿದ್ದಾರೆ. ಧೋನಿ ಬೈಕ್ ನಲ್ಲಿ ಬರುತ್ತಿರುವುದನ್ನು ಗಮನಿಸಿದ ಅಭಿಮಾನಿಯೊಬ್ಬ ಸೆಲ್ಫಿ ತೆಗೆಯಲು ಯತ್ನಿಸಿದ್ದಾನೆ. ಧೋನಿ ಮನೆಯ ಗೇಟ್ ಒಳಗೆ ಹೋಗುತ್ತಿರುವುದು ಕಂಡುಬಂದಿದೆ. ಧೋನಿ ಹೆಲ್ಮೆಟ್ ಧರಿಸಿದ್ದಾರೆ. ಧೋನಿ ಬೈಕ್ ಓಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿ ಭಾಯಿಯನ್ನು ಪ್ರತಿದಿನ ನೋಡುತ್ತಿರುವ ಆ ಮನೆಯ ಕಾವಲುಗಾರ ಎಷ್ಟು ಅದೃಷ್ಟಶಾಲಿ. ಧೋನಿ ಅವರನ್ನು ಭೇಟಿ ಮಾಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.