ಮತ್ತೊಂದು ದಾಖಲೆಗೆ ಸಾಕ್ಷಿಯಾದ ಧೋನಿ! ಕ್ರೀಸ್ ಗೇಲ್​, ರೋಹಿತ್ ನಂತರದಲ್ಲಿ ‘ಕ್ಯಾಪ್ಟನ್ ಕೂಲ್​’ | MS Dhoni

blank

MS Dhoni: ಮೇ.3ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB ) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ( CSK ) ನಡುವಿನ ರಣರೋಚಕ ಪಂದ್ಯದಲ್ಲಿ ಕೇವಲ 2 ರನ್‌ಗಳಿಂದ ಆರ್​ಸಿಬಿ ತವರಿನಲ್ಲಿ ಗೆದ್ದು ಬೀಗಿತು. ಕೊನೆ ಎಸೆತದವರೆಗೂ ಸಖತ್​ ಪೈಪೋಟಿ ನೀಡಿದ ಚೈನ್ನೈ ಬ್ಯಾಟರ್ಸ್​ ಅಂತಿಮವಾಗಿ ಮತ್ತೊಂದು ಸೋಲಿಗೆ ಶರಣಾಯಿತು. ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ಮತ್ತೊಮ್ಮೆ ಎಡವಿದ ಧೋನಿ, ಸೋಲಿನ ಸಂಪೂರ್ಣ ಹೊಣೆಯನ್ನು ತಾವೇ ಹೊತ್ತರು. ಇದೆಲ್ಲದರ ಮಧ್ಯೆ ಮತ್ತೊಂದು ದಾಖಲೆಗೆ ಧೋನಿ ಸಾಕ್ಷಿಯಾಗಿದ್ದಾರೆ.

blank

ಇದನ್ನೂ ಓದಿ: ಆಟವಾಡುವಾಗ ತಲೆಯ ಮೇಲೆ ಹಲಸಿನ ಹಣ್ಣು ಬಿದ್ದು 9 ವರ್ಷದ ಬಾಲಕಿ ದುರಂತ ಸಾವು! Jackfruit

ಐಪಿಎಲ್​ನಲ್ಲಿ ಹಲವಾರು ದಾಖಲೆಗಳನ್ನು ಹೊಂದಿರುವ ಸಿಎಸ್​ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್​, ಈಗ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಒಂದೇ ತಂಡದ ವಿರುದ್ಧ 50 ಸಿಕ್ಸರ್‌ಗಳನ್ನು ಬಾರಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಇದೀಗ ಧೋನಿ ಪಾತ್ರರಾಗಿದ್ದಾರೆ. ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಕೂಡ ಇಲ್ಲಿಯವರೆಗೆ ಈ ದಾಖಲೆಯನ್ನು ಸಾಧಿಸಲು ಸಾಧ್ಯವಾಗಿಲ್ಲ. ‘ಕ್ಯಾಪ್ಟನ್ ಕೂಲ್​’ಗಿಂತ ಮೊದಲು, ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮ ಈ ಸಾಧನೆಗೈದಿರುವ ಬ್ಯಾಟರ್​ಗಳು.

ಪಂಜಾಬ್ ಮತ್ತು ಕೆಕೆಆರ್ ವಿರುದ್ಧ ಗೇಲ್ 50ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ‘ಹಿಟ್‌ಮ್ಯಾನ್’ 50 ಸಿಕ್ಸರ್‌ಗಳನ್ನು ಸಿಡಿಸಿ, ಈ ದಾಖಲೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಸಾಲಿಗೆ ನಿನ್ನೆ (ಮೇ 3) ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ 50 ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ಸೇರಿಸಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿ ಈ ಅಪರೂಪದ ಮೈಲಿಗಲ್ಲು ತಲುಪಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಧೋನಿ (262) ನಾಲ್ಕನೇ ಸ್ಥಾನದಲ್ಲಿದ್ದರೆ, ಕ್ರಿಸ್ ಗೇಲ್ (357), ರೋಹಿತ್ ಶರ್ಮಾ (297) ಮತ್ತು ವಿರಾಟ್ ಕೊಹ್ಲಿ (290) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.

ಇದನ್ನೂ ಓದಿ: ಸಿಕ್ಸರ್​ ಸುರಿಮಳೆಯೊಂದಿಗೆ ಅಬ್ಬರಿಸಿದ ರೊಮಾರಿಯೊ ಶೆಫರ್ಡ್: ಹೊಸ ದಾಖಲೆ ಬರೆದ ಆರ್​ಸಿಬಿ! Romario Shepherd

ಒಂದು ತಂಡದ ವಿರುದ್ಧ 50ಕ್ಕೂ ಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರು

  • ಕ್ರಿಸ್ ಗೇಲ್, ಪಂಜಾಬ್ ವಿರುದ್ಧ – 61 ಸಿಕ್ಸ್​
  • ಕ್ರಿಸ್ ಗೇಲ್, ಕೆಕೆಆರ್ ವಿರುದ್ಧ – 54 ಸಿಕ್ಸ್​
  • ರೋಹಿತ್ ಶರ್ಮಾ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ – 50 ಸಿಕ್ಸ್
  • ಎಂಎಸ್ ಧೋನಿ, ಆರ್‌ಸಿಬಿ ವಿರುದ್ಧ – 50 ಸಿಕ್ಸ್​

ತೆರೆಯದ ಡ್ಯಾಮ್ ಗೇಟ್​, ಒಣಗುತ್ತಿವೆ ತಂಪಾಗಿದ್ದ ಪ್ರದೇಶ! ಸೊಕ್ಕಿನ ಸವಾಲು ಎಸೆಯುವ ಪಾಕ್​ ಗತಿ ಅಲ್ಲೋಲ-ಕಲ್ಲೋಲ | Pakistan

 

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank