

ಧಾರವಾಡ: ಕನ್ನಡ ಕಿರಿತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ 8ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬಿಗ್ ಮನೆ ಪ್ರವೇಶಿಸಲಿದ್ದಾರೆ ಎಂಬ ಕೂತೂಹಲ ಮೂಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.
ಆದರೆ, ಅದಕ್ಕೂ ಮುನ್ನವೇ ಸ್ಪರ್ಧಿಯೊಬ್ಬರ ಹೆಸರು ಬಹಿರಂಗವಾಗಿದೆ. ಹೌದು. ಬಿಗ್ಬಾಸ್ ಮನೆಗೆ ಧಾರವಾಡ ಗಾಯಕನ ಎಂಟ್ರಿಯಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ.
ಶೋನ ಆರಂಭಕ್ಕೂ ಮೊದಲೇ ಸ್ಪರ್ಧಿಯ ಹೆಸರು ಬಹಿರಂಗವಾಗಿದೆ. ಬಿಗ್ಬಾಸ್ ಸ್ಪರ್ಧಿಯಾಗಲಿದ್ದಾರಂತೆ ವಿಶ್ವನಾಥ ಹಾವೇರಿ. ವಿಶ್ವನಾಥ್, ಧಾರವಾಡದ ಯುವ ಗಾಯಕ. ಕಲರ್ಸ್ ಕನ್ನಡದಲ್ಲಿ ಮೂಡಿಬಂದ "ಹಾಡು ಕರ್ನಾಟಕ" ರಿಯಾಲಿಟಿ ಶೋನಲ್ಲಿ ತಮ್ಮ ಪ್ರತಿಭೆ ಮೂಲಕ ಖ್ಯಾತಿ ಪಡೆದಿದ್ದಾರೆ.
ವಿಶ್ವನಾಥ್ ಸ್ಪರ್ಧೆ ಕುರಿತು ಧಾರವಾಡ ಬಾಂಡ್ಸ್ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ. ಧಾರವಾಡದ ಪ್ರತಿಷ್ಠಿತ ಫೇಸ್ಬುಕ್ ಪೇಜ್ನಲ್ಲಿ ವಿಶ್ವನಾಥ ಹೆಸರು ಬಹಿರಂಗವಾಗಿದ್ದು, ಶುಭ ಕೋರಲಾಗಿದೆ. ಆದರೆ, ಇದು ಅಧಿಕೃತವೇ ಎಂಬುದು ಖಚಿತವಾಗಿಲ್ಲ. ಇದು ನಿಜವೇ ಆಗಿದ್ದರೆ ಇಂದು ಕಾರ್ಯಕ್ರಮದ ಆರಂಭದ ಬಳಿಕ ಗೊತ್ತಾಗಲಿದೆ. (ದಿಗ್ವಿಜಯ ನ್ಯೂಸ್)