ಧರ್ಮಸ್ಥಳ ಲಕ್ಷದೀಪೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ

Bel_Deepotsava
Published on

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ನ.26ರಿಂದ ಡಿ.1ರವರೆಗೆ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನ.26ರಂದು ಸಂಜೆ 6.30ರಿಂದ 7.30ರವರೆಗೆ ಶ್ರೀದೇವಿ ಸಚಿನ್, ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ, ಧರ್ಮಸ್ಥಳ ಅವರಿಂದ ಸುಗಮ ಸಂಗೀತ, 7.30ರಿಂದ 8.30ರ ವರೆಗೆ ಗೀತ ನೃತ್ಯಾಲಯ ಧರ್ಮಸ್ಥಳ ಅವರಿಂದ ಸಮೂಹ ನೃತ್ಯ, 8.30ರಿಂದ 9.30ರವರೆಗೆ ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ ಬೆಂಗಳೂರು ಅವರಿಂದ ಮಹಾನ್ ಬುದ್ಧ ಡಾನ್ಸ್ ಡ್ರಾಮ, 9.30ರಿಂದ ಪದ್ಮನಾಭ ಜೈನ್ ಸುಳ್ಯ ಅವರಿಂದ ಯಕ್ಷಗಾನ-ಜನಜಾಗೃತಿ ಧರ್ಮಕ್ಷೇತ್ರ(ಮದ್ಯವರ್ಜನ) ನಡೆಯಲಿದೆ.

27ರಂದು ಕೆರೆಕಟ್ಟೆ ಉತ್ಸವ, ಸಂಜೆ 6.30ರಿಂದ 7.30ರವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ವಿದುಷಿ ಎಂ.ಎಸ್ ಕೀರ್ತನಾ ಮತ್ತು ಎಂ.ಎಸ್ ಪ್ರಾರ್ಥನಾ ಮೈಸೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7.30ರಿಂದ 8.30ರವರೆಗೆ ವಿದ್ವಾನ್ ಎಚ್.ಎಲ್ ಶಿವಶಂಕರ ಸ್ವಾಮಿ ಮೈಸೂರು ಅವರಿಂದ ಲಯಲಹರಿ-ತಾಳವಾದ್ಯ ಸಂಗೀತ ಮೇಳ, 8.30ರಿಂದ 9.30ರವರೆಗೆ ನಾಟ್ಯಕ್ಷೇತ್ರ ಬೆಂಗಳೂರು ಅವರಿಂದ ರಾಮಪ್ರಿಯ ತುಳಸೀದಾಸ ನೃತ್ಯರೂಪಕ, 9.30ರಿಂದ 10.30ರವರೆಗೆ ಎಸ್‌ಡಿಎಂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಹಿಡಿಂಬಾ ವಿವಾಹ-ಬಕಾಸುರ ವಧೆ ನಡೆಯಲಿದೆ.

28ರಂದು ಲಲಿತೋದ್ಯಾನ ಉತ್ಸವ, ಸಂಜೆ 6.15ರಿಂದ 7.15ರವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಆತ್ಮಶ್ರೀ ಮತ್ತು ಆದಿಶ್ರೀ ಸಹೋದರಿಯರು ಮಂಗಳೂರು ಅವರಿಂದ ಗಾನಸಂಭ್ರಮ, 7.15ರಿಂದ 8.30ರವರೆಗೆ ನಟೇಶ ನೃತ್ಯನಿಕೇತನ, ಉಚ್ಚಿಲ ಅವರಿಂದ ಭರತನಾಟ್ಯ ಮತ್ತು ಕೂಚಿಪುಡಿ, 830ರಿಂದ 9.45ರವರೆಗೆ ನೃತ್ಯ ಕುಟೀರ, ಬೆಂಗಳೂರು ಅವರಿಂದ ನೃತ್ಯರೂಪಕ, 9.45ರಿಂದ 10.45ರವರೆಗೆ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಪುತ್ತೂರು ಅವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5.30ರಿಂದ 7ಗಂಟೆಯರವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿಯಲ್ಲಿ ನಾದಸ್ವರ ವಾದನ, 7.30ರಿಂದ 8.30ರವರೆಗೆ ಶ್ರೀಶಂಕರ ಶಾನುಭಾಗ್ ಮತ್ತು ತಂಡ ಬೆಂಗಳೂರು ಅವರಿಂದ ಶಾಸ್ತ್ರೀಯ ಸಂಗೀತ, 8.30ರಿಂದ 10 ಗಂಟೆಯವರೆಗೆ ನಾಟ್ಯಾರಾಧನ ಕಲಾ ಕೇಂದ್ರ ಮಂಗಳೂರು ಅವರಿಂದ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನಡೆಯಲಿದೆ.

29ರಂದು ಕಂಚಿಮಾರು ಕಟ್ಟೆ ಉತ್ಸವ, ಸಂಜೆ 5.30ರಿಂದ 6.30ರವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಅನ್ವಿತ್ ಕುಮಾರ್ ಮತ್ತು ಬಳಗ ಗೋಣಿಕೊಪ್ಪಲು ಅವರಿಂದ ಸಂಗೀತ ರಸಸಂಜೆ, 6.30ರಿಂದ 7.30ರವರೆಗೆ ಲೀಲಾ ನಾಟ್ಯಕಲಾ ವೃಂದ ಬೆಂಗಳೂರು ಅವರಿಂದ ಭರತನಾಟ್ಯ, 7.30ರಿಂದ 8.15ರ ವರೆಗೆ ಪಟ್ಟಾಭಿರಾಮ ಸುಳ್ಯ ಅವರಿಂದ ನಗೆಹಬ್ಬ, 8.15ರಿಂದ 9.30ರ ವರೆಗೆ ಅನನ್ಯ ಮತ್ತು ತಂಡ ಬೆಂಗಳೂರು ಅವರಿಂದ ಭರತನಾಟ್ಯ, 9.30ರಿಂದ 11ರವರೆಗೆ ಭ್ರಮಾಲೋಕ ಜಾದೂ ತಂಡದವರಿಂದ ಜಾದೂ ಜಾತ್ರೆ ನಡೆಯಲಿದೆ. ರಾತ್ರಿ 8.30ರಿಂದ ಶೀಜಿತ್ ಮತ್ತು ಪಾರ್ವತಿ ತಂಡ ಚೆನ್ನೈ ಅವರಿಂದ ಭರತನಾಟ್ಯ ನಡೆಯಲಿದೆ.

ನ.30 ರಂದು ಗೌರಿಮಾರು ಕಟ್ಟೆ ಉತ್ಸವ(ಲಕ್ಷದೀಪೋತ್ಸವ), ಸಂಜೆ 5.30ರಿಂದ 6.30ರವರೆಗೆ ವಸ್ತುಪ್ರದರ್ಶನ ಮಂಟಪದಲ್ಲಿ ಪಂಡಿತ ಬಾಲಚಂದ್ರ ನಾಕೋಡ್ ಅವರಿಂದ ಹಿಂದೂಸ್ತಾನಿ ಸಂಗೀತ, 6.30ರಿಂದ 7.30ರವರೆಗೆ ಗಾನ ನೃತ್ಯ ಅಕಾಡೆಮಿ ಬೆಂಗಳೂರು ಅವರಿಂದ ನೃತ್ಯ ಸಂಗಮ, 7.30ರಿಂದ 8.30ರವರೆಗೆ ದತ್ತಾತ್ರೆಯ ಮತ್ತು ವೃಂದ ಮೈಸೂರು ಅವರಿಂದ ವಾದ್ಯ ಸಂಗೀತ, 8.30ರಿಂದ 9.30ರವರೆಗೆ ಡಾ.ತೇಜಸ್ವಿನಿ ಎಲ್.ಬೆಂಗಳೂರು ಅವರಿಂದ ಭರತನಾಟ್ಯ, 9.30 ರಿಂದ 11ರವರೆಗೆ ಗಾನ ನಿನಾದ ಬೆಂಗಳೂರು ಇವರಿಂದ ಸಂಗೀತ ರಸಧಾರೆ ನಡೆಯಲಿದೆ. ರಾತ್ರಿ 8.30ರಿಂದ ರಾಜೇಶ್ ಕೃಷ್ಣನ್ ಮತ್ತು ತಂಡ ಬೆಂಗಳೂರು ಅವರಿಂದ ಸಂಗೀತ ಸಂಜೆ ನಡೆಯಲಿದೆ.

ಡಿ.1ರಂದು ಸಂಜೆ 6.30ರಿಂದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಭಗವಾನ್ ಚಂದ್ರನಾಥ ಸ್ವಾಮಿಯ ಸಮವಸರಣಪೂಜೆ, ಬಾಹುಬಲಿ ಸೇವಾ ಸಮಿತಿ ಧರ್ಮಸ್ಥಳ ಇದರ ಶ್ರಾವಕ. ಶ್ರಾವಕಿಯರಿಂದ ಜಿನಗಾನೋತ್ಸವ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net