

ಸುಳ್ಯ: ತಮಿಳು ಸಮುದಾಯದವರು ಸುಳ್ಯ ಭಾಗಕ್ಕೆ ಬಂದು 5 ದಶಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜಿಸಲಾಗಿತ್ತು.
ಮಾಜಿ ಐಎಎಸ್ ಅಧಿಕಾರಿ, ಸಂಸದ ಸಸಿಕಾಂತ್ ಸೆಂಥಿಲ್ ಚಾಲನೆ ನೀಡಿದರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶೆ ವನಿತಾದೇವಿ ಸೋಮಶೇಖರ್, ಮಾಜಿ ಸಚಿವ ಬಿ.ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ರೆಪ್ಕೋ ಬ್ಯಾಂಕ್ ಅಧ್ಯಕ್ಷ ಇ.ಸಂದಾನಂ, ರೆಪ್ಕೋ ಹೋಮ್ ಫೈನಾನ್ಸ್ ಅಧ್ಯಕ್ಷ ತಂಗರಾಜ್, ಕೆಎಫ್ಡಿಸಿ ರಾಜ್ಯ ವ್ಯವಸ್ಥಾಪಕ ಮಹೇಶ್ ಶಿರೂರ್, ಎಸ್ಸಿಡಿಸಿಸಿ ನಿರ್ದೇಶಕ ಎಸ್.ಎನ್.ಮನ್ಮಥ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಸುಳ್ಯ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಮೊದಲಾದವರು ಭಾಗವಹಿಸಿದ್ದರು.
ಜ್ಯೋತಿ ಸರ್ಕಲ್ನಿಂದ ಮೆರವಣಿಗೆ ಆರಂಭವಾಗಿ ಮುಖ್ಯ ರಸ್ತೆಯಲ್ಲಿ ಸಾಗಿ ಬಂತು. ನಾಸಿಕ್ ಬ್ಯಾಂಡ್, ಕೇರಳ ಚೆಂಡೆ ಸಹಿತ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿದ್ದವು.