

ಉಳ್ಳಾಲ : ನಾಲ್ಕು ದಶಕಗಳ ಬಳಿಕ ಕಿನ್ಯಾ ಬೆಳರೆಂಗಿ ಸಾಂತ್ಯಗುತ್ತುವಿನ ಧೂಮಾವತಿ- ಬಂಟ ದೈವಗಳಿಗೆ ಭಾನುವಾರ ‘ಧರ್ಮನೇಮ’ ನಡೆಯುವ ಪ್ರಯುಕ್ತ ಶುಕ್ರವಾರ ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದ ಸಾಂತ್ಯಗುತ್ತುವಿಗೆ ಕೊಪ್ಪರಿಗೆ ಸಹಿತ ಹಸಿರು ಹೊರೆಕಾಣಿಕೆ ಮೆರವಣಿಗೆ ಜರುಗಿತು.
ದೈವಗಳಿಗೆ ಸಮರ್ಪಣೆಯಾಗಲಿರುವ ನೂತನ ಬೆಳ್ಳಿ ಅಣಿ, ಕಂಚಿನ ಮೊಗದೊಂದಿಗೆ ಸಾಂತ್ಯಗುತ್ತುವಿಗೆ ಸಾಗಿದ ಹೊರೆಕಾಣಿಕೆ ಮೆರವಣಿಗೆಗೆ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಪ್ರಧಾನ ಅರ್ಚಕ ಗಣೇಶ್ ಭಟ್ ಪಂಜಾಳ ಚಾಲನೆ ನೀಡಿದರು.
ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಹಾಗೂ ಧರ್ಮನೇಮ ಸಮಿತಿ ಪ್ರಧಾನ ಸಂಚಾಲಕ ಡಾ.ಮೋಹನ್ ದಾಸ್ ರೈ ಸಾಂತ್ಯಗುತ್ತು, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ಕಜೆ, ನಯನಾ ಪಾರ್ಥಸಾರಥಿ, ಆಶಾ ಪದ್ಮನಾಭ ಶೆಟ್ಟಿ ಬಾವ, ಮೋಹನದಾಸ್ ಶೆಟ್ಟಿ ನೆತ್ತಿಳಬಾಳಿಕೆ, ಧರ್ಮನೇಮ ಸಮಿತಿ ಕಾರ್ಯಾಧ್ಯಕ್ಷರಾದ ಶಿವರಾಮ ಶೆಟ್ಟಿ ಸಾಂತ್ಯಗುತ್ತು, ಸದಾನಂದ ಶೆಟ್ಟಿ ಸಾಂತ್ಯಗುತ್ತು, ಪ್ರಧಾನ ಸಂಚಾಲಕರಾದ ಸುರೇಶ್ ಆಳ್ವ ಸಾಂತ್ಯಗುತ್ತು, ರಮಾನಾಥ ಕಾವ ಸಾಂತ್ಯಗುತ್ತು, ರವಿರಾಜ್ ರೈ ಸಾಂತ್ಯಗುತ್ತು, ಉದಯಕುಮಾರ್ ಶೆಟ್ಟಿ ಸಾಂತ್ಯಗುತ್ತು, ಪ್ರವೀಣ್ ಪಲಾಯಿ ಸಾಂತ್ಯಗುತ್ತು, ಕೋಶಾಧಿಕಾರಿ ಡಾ.ಕಿಶೋರ್ ಶೆಟ್ಟಿ ಸಾಂತ್ಯಗುತ್ತು, ಅತಿಥಿ ಸತ್ಕಾರ ಸಮಿತಿಯ ಪ್ರಭಾಕರ ಸಾಮಾನಿ ಸಾಂತ್ಯಗುತ್ತು, ಸಾಮಾಜಿಕ ಜಾಲತಾಣ ಸಮಿತಿ ಸಂಚಾಲಕ ಸಾಹಸ್ ಆಳ್ವ ಸಾಂತ್ಯಗುತ್ತು, ಸಚಿನ್ ಚೌಟ ಸಾಂತ್ಯಗುತ್ತು, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ನವೀನ್ ಆಳ್ವ ಪಿಲಿಕೂರು, ನಿತ್ಯಾನಂದ ಭಂಡಾರಿ ಮಾರುಜಾಗ, ಪ್ರಮುಖರಾದ ಪ್ರಭಾಕರ ಶೆಟ್ಟಿ ಕಿನ್ಯಗುತ್ತು, ರಘುನಾಥ ಶೆಟ್ಟಿ ಸಾಂತ್ಯ ಗಡದಗುತ್ತು, ರಾಮ್ ಮೋಹನ್ ರೈ ಉಪಸ್ಥಿತರಿದ್ದರು.