

ಸುಬ್ರಹ್ಮಣ್ಯ: ಉಡುಪಿ ಜಿಲ್ಲೆಯ ಪರಣಂಕಿಲದಲ್ಲಿ ಏಪ್ರಿಲ್ನಲ್ಲಿ ನಡೆಯಲಿರುವ ಭಕ್ತಿ, ಜ್ಞಾನ, ಅಧ್ಯಾತ್ಮದ ಮಹಾ ಉತ್ಸವ ಭಕ್ತಿ ಸಿದ್ಧಾಂತೋತ್ಸವ-ಶ್ರೀಮದ್ ಬ್ರಹ್ಮಸೂತ್ರ ಅನುವ್ಯಾಖ್ಯಾನ ಸುಧಾಮಂಗಳೋತ್ಸವ, ದಶಕೋಟಿ ರಾಮ ತಾರಕ ಮಂತ್ರ ಜಪ ಅಭಿಯಾನ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಿದ ಭಕ್ತಿ ರಥಯಾತ್ರೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗುರುವಾರ ಆಗಮಿಸಿತು.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಸುದರ್ಶನ್ ಜೋಯಿಸ ಸೇರಿದಂತೆ ಭಕ್ತರು ಕುಕ್ಕೆ ಕ್ಷೇತ್ರಕ್ಕೆ ಸ್ವಾಗತಿಸಿದರು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ಭಕ್ತಿ ರಥಕ್ಕೆ ಮಂಗಳಾರತಿ ಸಮರ್ಪಿಸಿ, ವಿಶೇಷ ಪೂಜೆ ಮಾಡಿದರು.