ಹಿಂದಿ ವಿಡಿಯೋ ಆಲ್ಬಂನಲ್ಲಿ ಧರ್ಮ ಕೀರ್ತಿರಾಜ್ ...

Dharma Keerthiraj - Final
Published on

ಬೆಂಗಳೂರು: 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​ ಅಭಿನಯದ ’ನವಗ್ರಹ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಧರ್ಮ ಕೀರ್ತಿರಾಜ್, ಅದರಲ್ಲಿನ ’ಕಣ್ ಕಣ್ಣ ಸಲಿಗೆ ...’ ಹಾಡಿನಿಂದ ಜನಪ್ರಿಯರಾದರು. ಆ ನಂತರ ಹಲವು ಚಿತ್ರಗಳಲ್ಲಿ ನಟಿಸಿರುವ ಧರ್ಮ, ಇದೀಗ ಹಿಂದಿ ವಿಡಿಯೋ ಆಲ್ಬಂ​ನಲ್ಲಿ ಕಾಣಿಸಿಕೊಂಡಿದ್ದಾರೆ.

’ಕಿತ್ನಾ ಮಜಾ ಹೇ’ ಎನ್ನುವ ನಾಲ್ಕು ನಿಮಿಷದ ಹಿಂದಿ ವಿಡಿಯೋ ಆಲ್ಬಂ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಧರ್ಮ ಕೀರ್ತಿರಾಜ್​ ಕಾಣಿಸಿಕೊಂಡಿದ್ದಾರೆ. ಪ್ರೀತಿಯಲ್ಲಿ ಮೋಸ ಹೋಗಿ ಆತ್ನಹತ್ಯೆಗೆ ಶರಣಾಗುವ ಹುಡುಗಿಯನ್ನು ಕಾಪಾಡಿ, ಅವಳಲ್ಲಿ ಅನುರಕ್ತಳಾಗಿ ಒಂದಾಗುವ ಕತೆ ಈ ಹಾಡಿನಲ್ಲಿದೆ. ಈ ಹಾಡನ್ನು ರವಿ ಶರ್ಮ ಎಂಬುವವರು ನಿರ್ದೇಶಿಸಿದ್ದು, ಅಜಯ್‌ ದೇವಗನ್ ಮತ್ತು ರಣ್‌ಭೀರ್‌ ಕಪೂರ್ ಚಿತ್ರಗಳಿಗೆ ಕೆಲಸ ಮಾಡಿರುವ ಪಪ್ಪುಮಾಲ ಕ್ರಿಯೇಟೀವ್ ನಿರ್ದೇಶಕರಾಗಿದ್ದಾರೆ.

ಧರ್ಮಗೆ ನಾಯಕಿಯಾಗಿ ನಗ್ಮ ಅಖ್ತರ್​ ನಟಿಸಿದ್ದು, ಗೀತೆಗೆ ಧ್ವನಿಯಾಗಿರುವ ಅಲ್ತಾಫ್‌ ಸಯ್ಯದ್​ ಹಾಡಿನಲ್ಲಿ ಬಂದು ಹೋಗುತ್ತಾರೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ಗೀತೆಯು ಕ್ರಮೇಣ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net