ತ್ಯಾಜ್ಯ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪ : ಐಕ್ಯರಂಗದಿಂದ ಮಧೂರು ಗ್ರಾಪಂ ಕಚೇರಿ ಎದುರು ಧರಣಿ

protest
ಐಕ್ಯರಂಗ ಮಧೂರು ಪಂಚಾಯಿತಿ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಧರಣಿಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಹಸಿರು ಕೇರಳ ಯೋಜನೆಯನ್ವಯ ಸಂಗ್ರಹವಾದ ತ್ಯಾಜ್ಯವನ್ನು ಮಾನದಂಡ ಕೈಬಿಟ್ಟು ವಿವಿಧ ಕಂಪನಿಗಳಿಗೆ ಪೂರೈಸಿರುವುದಾಗಿ ಆರೋಪಿಸಿ ಐಕ್ಯರಂಗ ಮಧೂರು ಪಂಚಾಯಿತಿ ಸಮಿತಿ ವತಿಯಿಂದ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಧರಣಿ ಉದ್ಘಾಟಿಸಿದರು. ಐಕ್ಯರಂಗ ಪಂಚಾಯಿತಿ ಸಮಿತಿ ಅಧ್ಯಕ್ಷ ಹಾರಿಸ್ ಚೂರಿ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಕರಿತ ತ್ಯಾಜ್ಯವನ್ನು ಮಾನದಂಡ ಅನುಸರಿಸದೆ ಖಾಸಗಿ ಕಂಪನಿಗೆ ಅಲ್ಪ ಮೊತ್ತಕ್ಕೆ ನೀಡುವ ಮೂಲಕ ಬಿಜೆಪಿ ನೇತೃತ್ವದ ಆಡಳಿತ ಮಂಡಳಿ ಭ್ರಷ್ಟಾಚಾರ ನಡೆಸಿರುವುದಾಗಿ ಪ್ರತಿಭಟನಾಕಾರರು ಆರೋಪಿಸಿದರು. ಧರಣಿಗೂ ಮೊದಲು ಉಳಿಯತ್ತಡ್ಕದ ಮುಸ್ಲಿಂಲೀಗ್ ಕಚೇರಿ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯನ್ನು ಪಂಚಾಯಿತಿ ಕಚೇರಿ ವಠಾರದಲ್ಲಿ ಪೊಲೀಸರು ತಡೆದರು

ಮುಖಂಡರಾದ ವಕೀಲ ಗೋವಿಂದನ್ ನಾಯರ್, ಟಿ.ಎಂ.ಇಕ್ಬಾಲ್, ಕೆ.ಖಾಲಿದ್, ಸಾಜಿದ್ ಮವ್ವಾಲ್, ಮಜೀದ್ ಪಟ್ಲ, ಮುತಾಲಿಬ್ ಪಾರಕಟ್ಟು, ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಸೈಮಾ, ಸದಸ್ಯೆ ಜಮೀಲಾ ಅಹ್ಮದ್, ಜಿಲ್ಲಾ ಪಂಚಾಯಿತಿ ಸದಸ್ಯೆ ಜಾಸ್ಮಿನ್ ಕಬೀರ್ ಚೆರ್ಕಳಂ, ಹಬೀಬ್ ಚೆಟ್ಟುಂಗುಯಿ ಮೊದಲಾದವರು ಉಪಸ್ಥಿತರಿದ್ದರು. ಸಂಚಾಲಕ ಪಿ.ಪಿ.ಸುಮಿತ್ರನ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net