ಸಾಮಾನ್ಯ ಮಳೆಗೆ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಜಲಾವೃತ

WhatsApp Image 2024-06-08 at 12.40.45 PM
ಮಂಗಳೂರು ಕೊಟ್ಟಾರ ಫ್ಲೈಓವರ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆರೆ ನೀರಿನ ಮೇಲೆ ಸಂಚರಿಸುತ್ತಿರುವ ವಾಹನಗಳು.
Published on

ಮಂಗಳೂರು: ನಗರದಲ್ಲಿ ಶನಿವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಸಾಮಾನ್ಯ ಮಳೆಗೆ ಮಂಗಳೂರು ಕೊಟ್ಟಾರ ಸಮೀಪ ರಾಷ್ಟ್ರೀಯ ಹೆದ್ದಾರಿ ಹಾಗೂ ಆಸುಪಾಸಿನ ಇತರ ರಸ್ತೆಗಳು ಜಲಾವೃತವಾಗಿವೆ.
ಪ್ರಾಕೃತಿಕ ವಿಪತ್ತು ನಿರ್ವಹಣಾ ಜಿಲ್ಲಾ ಸಮಿತಿ, ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕೃತಕ ನೆರೆ ನಿರ್ವಹಣೆ ಕಾಮಗಾರಿ ನಡೆಯುತ್ತಿದ್ದರೂ, ಕೃತಕ ನೆರೆ ಭೀತಿ ದೂರವಾಗಿಲ್ಲ.
ಗೋರಿಗುಡ್ಡ- ವೆಲೆನ್ಸಿಯಾ ನಡುವೆ ಸುಮಾರು ಒಂದು ಕಿ.ಮೀ. ರಸ್ತೆಯ ಒಂದು ಬದಿ ಅಗೆಯಲಾಗಿದ್ದು, ಈ ಭಾಗದಲ್ಲಿ ಜನರು, ಶಾಲಾ ಮಕ್ಕಳು ಭಯದಿಂದ ಸಂಚರಿಸುವ ಪರಿಸ್ಥಿತಿ ಇದೆ.
ಮಳೆಗಾಲದಲ್ಲಿ ರಸ್ತೆ ಅಗೆಯಬಾರದು ಎಂದು ಪಾಲಿಕೆ ಎಚ್ಚರಿಕೆ ನೀಡುತ್ತಿದ್ದರೂ ನಗರದ ಹಲವೆಡೆ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯುತ್ತಿರುವುದು ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net