

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು, ವಲಯ, ಒಕ್ಕೂಟದ ಮಾಸಿಕ ಸಭೆ ಮತ್ತು ಲಾಭಾಂಶ ವಿತರಣೆ ಕಡಬ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯೆ ಸರೋಜಿನಿ ಎಸ್. ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ, ಲಾಭಾಂಶ ವಿತರಿಸಿದರು. ಕಡಬ ಒಕ್ಕೂಟದ ಅಧ್ಯಕ್ಷೆ ನಳಿನಿ ರೈ ಅಧ್ಯಕ್ಷತೆ ವಹಿಸಿದ್ದರು. ಕಡಬ ವಲಯ ಒಕ್ಕೂಟಗಳ ವಲಯ ಅಧ್ಯಕ್ಷ ರಮೇಶ್ ರೈ ಅರ್ಪಜೆ ಉಪಸ್ಥಿತರಿದ್ದರು.
ಸದಸ್ಯ ಅಬ್ದುಲ್ ಲತ್ೀ ಸ್ವಾಗತಿಸಿದರು. ಕಡಬ ವಲಯದ ಮೇಲ್ವಿಚಾರಕ ವಿಜೇಶ್ ಜೈನ್ ಪ್ರಸ್ತಾವಿಸಿದರು. ಕಡಬ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಸವಿತಾ ನಿರ್ವಹಿಸಿ, ವಂದಿಸಿದರು.