

ಲಾಡೆರ್ಹಿಲ್: ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿ, ಫ್ಯಾಷನ್ ಶೋಗಳಿಗೆ ಜನಪ್ರಿಯವಾಗಿರುವ ನಗರ. ಇದರ ಸಮೀಪದಲ್ಲೇ ಇರುವ ಲಾಡೆರ್ಹಿಲ್ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೇ 2 ಪಂದ್ಯಗಳು ನಡೆಯುತ್ತಿವೆ. ಈ ವೇಳೆ ಟೀಮ್ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮ, ಮಿಯಾಮಿಯ ಗ್ಲಾಮರಸ್ ಫ್ಯಾಷನ್ಗೆ ಹೊಂದಿಕೆಯಾಗುವ ಧಿರಿಸಿನೊಂದಿಗೆ ಭಾರತ-ವಿಂಡೀಸ್ ಟಿ20 ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡು ಗಮನಸೆಳೆದಿದ್ದಾರೆ.
ಯೂಟ್ಯೂಬರ್ ಮತ್ತು ಕೋರಿಯೋಗ್ರಾರ್ ಕೂಡ ಆಗಿರುವ ಧನಶ್ರೀ ವರ್ಮ ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 'ಮ್ಯಾಚ್ ಇನ್ ಮಿಯಾಮಿ. ಅತ್ಯಂತ ಸುಂದರವಾದ ಮಿಯಾಮಿಯ ಕ್ರಿಕೆಟ್ ಪ್ರೇಮಿಗಳನ್ನು ಕಂಡು ಬೆರಗಾದೆ' ಎಂದು ಧನಶ್ರೀ ವರ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 55 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ಧನಶ್ರೀ ವರ್ಮ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿರುವುದು ಇದೇ ಮೊದಲಲ್ಲ. ವಿವಿಧ ಜನಪ್ರಿಯ ಹಾಡುಗಳಿಗೆ ನರ್ತಿಸಿರುವ ವಿಡಿಯೋಗಳನ್ನೂ ಪೋಸ್ಟ್ ಮಾಡುವ ಮೂಲಕ ಅವರು ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ.