More

    ಇನ್​ಸ್ಟಾಗ್ರಾಂನಲ್ಲಿ ಪ್ರತಿ ಪೋಸ್ಟ್​ಗೆ 11.45 ಕೋಟಿ ರೂ. ಚಾರ್ಜ್​ ಮಾಡ್ತಾರೆ ಕೊಹ್ಲಿ! ಯಾರು ಕೊಡ್ತಾರೆ ಈ ಹಣ?

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ನಾಯಕ ಹಾಗೂ ಬ್ಯಾಟಿಂಗ್​ ತಾರೆ ವಿರಾಟ್​ ಕೊಹ್ಲಿ ಇನ್​ಸ್ಟಾಗ್ರಾಂನಲ್ಲಿ ಮಾಡುವ ಪ್ರತಿ ಪ್ರಾಯೋಜಿತ ಪೋಸ್ಟ್​ಗೂ 11.45 ಕೋಟಿ ರೂ. ಪಡೆಯುತ್ತಾರೆ ಎಂದು ಸಾಮಾಜಿಕ ಜಾಲತಾಣಗಳ ಮಾರ್ಕೆಟಿಂಗ್​ ಸಂಸ್ಥೆ ‘ಹಾಪರ್​ ಎಚ್​ಕ್ಯೂ’ ವರದಿ ಮಾಡಿದೆ. ಈ ಮೂಲಕ ಕೊಹ್ಲಿ ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ಅತ್ಯಧಿಕ ಹಣ ಸಂಪಾದಿಸುವ ಏಷ್ಯನ್​, ಭಾರತೀಯ, ಕ್ರಿಕೆಟಿಗ ಮತ್ತು ವಿಶ್ವದ 3ನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ‘ಹಾಪರ್​ ಎಚ್​ಕ್ಯೂ’ ಪ್ರಕಟಿಸಿರುವ 100 ಸೆಲೆಬ್ರಿಟಿ-ಕ್ರೀಡಾಪಟುಗಳ ಪ್ರತಿ ಪೋಸ್ಟ್​ ಸಂಪಾದನೆಯ ಲೆಕ್ಕಾಚಾರದಲ್ಲಿ ಕೊಹ್ಲಿ ಅಗ್ರ 20ರೊಳಗಿರುವ ಏಕೈಕ ಭಾರತೀಯರೂ ಆಗಿದ್ದಾರೆ. ಪ್ರತಿ ಪೋಸ್ಟ್​ಗೆ 26.7 ಕೋಟಿ ರೂ. ಪಡೆಯುವ ಪೋರ್ಚುಗಲ್​ ಫುಟ್​ಬಾಲ್​ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದರೆ, 21.5 ಕೋಟಿ ರೂ. ಪಡೆಯುವ ಅರ್ಜೆಂಟೀನಾದ ಫುಟ್​ಬಾಲ್​ ತಾರೆ ಲಿಯೋನೆಲ್​ ಮೆಸ್ಸಿ 2ನೇ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಕೆಲ ಸೆಲೆಬ್ರಿಟಿಗಳಿದ್ದು, 14ನೇ ಸ್ಥಾನದಲ್ಲಿರುವ ವಿರಾಟ್​ ಕೊಹ್ಲಿ ಅವರೇ ನಂತರದ ಕ್ರೀಡಾತಾರೆಯಾಗಿದ್ದಾರೆ. ಬ್ರೆಜಿಲ್​ ಫುಟ್​ಬಾಲ್​ ತಾರೆ ನೇಮರ್​ (19ನೇ ಸ್ಥಾನ), ಫ್ರಾನ್ಸ್​ನ ಕೈಲಿಯನ್​ ಎಂಬಾಪೆ (27) ಅವರಿಗಿಂತಲೂ ಕೊಹ್ಲಿ ಮೇಲಿನ ಸ್ಥಾನದಲ್ಲಿದ್ದಾರೆ.

    29ನೇ ಸ್ಥಾನದಲ್ಲಿರುವ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ (ಪ್ರತಿ ಪೋಸ್ಟ್​ಗೆ 4.40 ಕೋಟಿ ರೂ.) ಈ ಪಟ್ಟಿಯಲ್ಲಿರುವ ಮತ್ತೋರ್ವ ಭಾರತೀಯರಾಗಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಆರ್​ಸಿಬಿ ತಂಡದದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ (ಪ್ರತಿ ಪೋಸ್ಟ್​ಗೆ 1 ಕೋಟಿ ರೂ.) 76ನೇ ಸ್ಥಾನದಲ್ಲಿದ್ದು, ಈ ಪಟ್ಟಿಯಲ್ಲಿರುವ ಮತ್ತೋರ್ವ ಕ್ರಿಕೆಟಿಗರಾಗಿದ್ದಾರೆ.

    ಇದು ಆಧುನಿಕ ಮಾರ್ಕೆಟಿಂಗ್​ ತಂತ್ರ!
    ಸೆಲೆಬ್ರಿಟಿಗಳು ಇನ್​ಸ್ಟಾಗ್ರಾಂನಿಂದ ಎಲ್ಲ ವೈಯಕ್ತಿಕ ಪೋಸ್ಟ್​ಗಳಿಗೂ ಹಣ ಸಂಪಾದಿಸುವುದಿಲ್ಲ. ಇದು ಪ್ರಾಯೋಜಿತ ಪೋಸ್ಟ್​ಗಳಿಗೆ ಮಾತ್ರ ಅನ್ವಯಿಸುತ್ತದೆ. ಯಾವ ಉತ್ಪನ್ನ ಅಥವಾ ಬ್ರಾಂಡ್​ ಬಗ್ಗೆ ಪೋಸ್ಟ್​ ಮಾಡುತ್ತಾರೋ ಆ ಕಂಪನಿಯಿಂದ ಕ್ರೀಡಾಪಟುವಿಗೆ ಹಣ ಸಂದಾಯವಾಗುತ್ತದೆ. ಇದು ಆಧುನಿಕ ಮಾರ್ಕೆಟಿಂಗ್​ ತಂತ್ರವಾಗಿದ್ದು, ಇನ್​ಸ್ಟಾಗ್ರಾಂ ಈಗ ವಿವಿಧ ಬ್ರಾಂಡ್​ಗಳ ಪ್ರಚಾರಕ್ಕೂ ಬಳಕೆಯಾಗುತ್ತಿದೆ. ಜನಪ್ರಿಯ ಮತ್ತು ಹೆಚ್ಚಿನ ಹಿಂಬಾಲಕರನ್ನು ಹೊಂದಿರುವ ಸೆಲೆಬ್ರಿಟಿಗಳು ವಿವಿಧ ಬ್ರಾಂಡ್​ಗಳ ಬಗ್ಗೆ ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದು ಈಗಾಗಲೆ ಜನಪ್ರಿಯವಾಗಿರುವ ಹೊಸ ರೀತಿಯ ಜಾಹೀರಾತು ಮಾರ್ಗವಾಗಿದೆ. ಇನ್​ಸ್ಟಾಗ್ರಾಂನಲ್ಲಿ ಹೊಂದಿರುವ ಹಿಂಬಾಲಕರ ಸಂಖ್ಯೆಗೆ ಅನುಗುಣವಾಗಿ ಕಂಪನಿಗಳು ಹಣ ಪಾವತಿ ಮಾಡುತ್ತವೆ. ಕೊಹ್ಲಿ ಸದ್ಯ 25.52 ಕೋಟಿ ಹಿಂಬಾಲಕರನ್ನು ಹೊಂದಿದ್ದರೆ, ರೊನಾಲ್ಡೊಗೆ ಗರಿಷ್ಠ 59.68 ಕೋಟಿ ಹಿಂಬಾಲಕರಿದ್ದಾರೆ.

    ಕೀನ್ಯಾ ವಿರುದ್ಧ ಬೇಕಿದ್ದರೂ ಸೋಲಿರಿ, ಪಾಕ್​ ವಿರುದ್ಧ ಸೋಲಬೇಡಿ ಎನ್ನುತ್ತಿದ್ದರು ಎಂದ ಕುಂಬ್ಳೆ

    ಹಾಲಿ ವಿಶ್ವ ನಂ. 1 ಟೆನಿಸ್​ ಆಟಗಾರನ ಕ್ರಷ್​ ಈ ಮಾಜಿ ನಂ. 1 ಆಟಗಾರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts