Dewald Brevis: ನಿನ್ನೆ (ಮೇ.07) ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಸಿಎಸ್ಕೆ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಧೋನಿ ಪಡೆ 2 ರನ್ಗಳ ಜಯ ಸಾಧಿಸಿತು. ಈ ಮೂಲಕ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಪಡೆಗೆ ಗೆಲುವಿನ ಚೇತರಿಕೆ ಸಿಕ್ಕಿತು. ರೋಮಾಂಚಕ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಸಿಎಸ್ಕೆಗೆ ಡೆವಾಲ್ಡ್ ಬ್ರೆವಿಸ್ ಅವರ ಸ್ಫೋಟಕ ಬ್ಯಾಟಿಂಗ್ ಉತ್ತಮ ಫಲಿತಾಂಶ ತಂದುಕೊಟ್ಟಿತು.

ಕೆಕೆಆರ್ ನೀಡಿದ್ದ 180 ರನ್ಗಳ ಗುರಿಯನ್ನು ಬೆನ್ನತ್ತಿದ ಸಿಎಸ್ಕೆಗೆ ಎಂದಿನಂತೆ ಉತ್ತಮ ಆರಂಭ ಸಿಗಲಿಲ್ಲ. ಪವರ್ಪ್ಲೇ ಅವಧಿಯಲ್ಲೇ ಐದು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಬ್ರೆವಿಸ್ ಅವರ ಸ್ಫೋಟಕ ಇನ್ನಿಂಗ್ಸ್ ಗುರಿಯನ್ನು ತಲುಪಲು ಸಹಾಯ ಮಾಡಿತು. 25 ಎಸೆತದಲ್ಲಿ 52 ರನ್ ಬಾರಿಸಿದ ಬ್ರೆವಿಸ್ ( 4 ಬೌಂಡರಿ, 4 ಸಿಕ್ಸರ್) 11ನೇ ಓವರ್ನಲ್ಲಿ ಆಟದ ದಿಕ್ಕನ್ನು ಬದಲಿಸಿದರು. ಆಕರ್ಷಕ ಅರ್ಧ ಶತಕ ಬಾರಿಸಿದ ಬ್ರೆವಿಸ್, ತಮ್ಮ ಚೊಚ್ಚಲ ಐಪಿಎಲ್ ಅರ್ಧಶತಕ ದಾಖಲಿಸಿದ್ದು ವಿಶೇಷ.
#DewaldBrevis takes on #VaibhavArora with a massive over, pure power hitting!
What a knock this was!
Watch the LIVE action in BHOJPURI ➡ https://t.co/8mOnZZIBwU #IPLRace2Playoffs 👉 #KKRvCSK | LIVE NOW on Star Sports 1, Star Sports 1 Hindi, Star Sports 2, Star Sports 2… pic.twitter.com/lO3M1r26A6
— Star Sports (@StarSportsIndia) May 7, 2025
ಬ್ರೆವಿಸ್ ಸಿಕ್ಸರ್-ಬೌಂಡರಿಗಳ ಆರ್ಭಟ ತಗ್ಗಿಸುವಲ್ಲಿ ಮುಗ್ಗರಿಸಿದ ವೈಭವ್ ಅರೋರಾಗೆ ಮೈದಾನದಲ್ಲಿ ಭಾರೀ ಮುಖಭಂಗ ಉಂಟಾಯಿತು. ಎರಡು ತಂಡಗಳ ನಡುವಿನ ರೋಚಕ ಪೈಪೋಟಿ 20ನೇ ಓವರ್ವರೆಗೂ ತಲುಪಿ, ಅಂತಿಮವಾಗಿ ಸಿಎಸ್ಕೆ 2 ರನ್ಗಳ ಜಯ ಸಾಧಿಸುವ ಮೂಲಕ ಅಂತ್ಯ ಕಂಡಿತು.