ಬಜ್ಪೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

1 Min Read
ಬಜ್ಪೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ
ಬಜ್ಪೆ ಪೇಟೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಜಯಂತ್ ಸಾಲ್ಯಾನ್ ತೋಕೂರು, ಬಜ್ಪೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ಕಾನ ಮೊದಲಾದವರಿದ್ದರು.

ಗುರುಪುರ: ಬಜ್ಪೆ ಪೇಟೆಯಲ್ಲಿ 2.5 ಕೋ.ರೂ. ವೆಚ್ಚದಲ್ಲಿ ನಡೆಯಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಬುಧವಾರ ಗುದ್ದಲಿಪೂಜೆ ನೆರವೇರಿಸಿದರು.

ಹಂತಹಂತವಾಗಿ ಅಭಿವೃದ್ಧಿ ಕೆಲಸ

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಬಜ್ಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂತಹಂತವಾಗಿ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಮರವೂರು ಸೇತುವೆಯಿಂದ ಕೆಂಜಾರು ವರೆಗೆ 60 ಕೋ.ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಪ್ರಸಕ್ತ 2.5 ಕೋ. ರೂ. ವೆಚ್ಚದಲ್ಲಿ ಬಜ್ಪೆ ಮಾರುಕಟ್ಟೆಯಿಂದ ಬಜ್ಪೆ ಪೇಟೆಯ ಸೇತುವೆ ವರೆಗೆ ರಸ್ತೆ ಅಭಿವೃದ್ಧಿಗೊಳ್ಳಲಿದೆ ಎಂದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಜಯಂತ್ ಸಾಲ್ಯಾನ್ ತೋಕೂರು, ಬಜ್ಪೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ಕಾನ, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಉದ್ಯಮಿ ರಾಘವೇಂದ್ರ ಆಚಾರ್ಯ, ಪ್ರಮುಖರಾದ ಸುಮಾ ಶೆಟ್ಟಿ, ಜೋಕಿಂ ಡಿ’ಕಾಸ್ತ, ಗಣೇಶ್ ಅರ್ಬಿ, ಲೋಕೇಶ್ ಪೂಜಾರಿ, ಚಿತೇಶ್ ಶೆಟ್ಟಿ, ರಾಜೇಶ್ ಅಮೀನ್ (ಆರ್.ಕೆ.), ಲಕ್ಷ್ಮಣ್ ಮರವೂರು, ವಿಜಯಲಕ್ಷ್ಮೀ, ಚಿತ್ರಾ ಶೆಟ್ಟಿ, ಗಣೇಶ್ ಜೋಕಟ್ಟೆ, ಸುಧಾಕರ ಕಾಮತ್, ಸತೀಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

See also  ದೇಗುಲಗಳು ನೆಮ್ಮದಿಯ ತಾಣ
Share This Article