ಬೆಂಗಳೂರು: ಮುಂದಿನ ತಲೆಮಾರಿಗಾಗಿ ಸುಸ್ಥಿರ ಅಭಿವೃದ್ಧಿಗೆ ಆಡಳಿತ ನಡೆಸುವವರು ಹಾಗೂ ವೈಯಕ್ತಿಕವಾಗಿ ಪ್ರತಿಯೊಬ್ಬರ ಜವಾಬ್ದಾರಿಯೂ ಇದೆ ಎಂದು ಕೆನ್ನಾಮೆಟಲ್ ಇಂಡಿಯಾ ಲಿಮಿಟೆಡ್ ಎಂಡಿ ವಿಜಯಕೃಷ್ಣನ್ ವೆಂಕಟೇಶನ್ ಅಭಿಪ್ರಾಯಿಸಿದ್ದಾರೆ.
ರಾಮಯ್ಯ ಇನ್‌ಸ್ಟಿಟ್ಯೂಟ್ ಆ್ ಮ್ಯಾನೇಜ್‌ಮೆಂಟ್, ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ರಾಮಯ್ಯ ಕ್ಯಾಂಪಸ್‌ನ ಇಎಸ್‌ಬಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ಪರಿಸರ, ಸಾಮಾಜಿ ಆಡಳಿತ’ ಶೃಂಗಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸುಸ್ಥಿರ ಅಭಿವೃದ್ಧಿ ವಿಷಯದಲ್ಲಿ ಪ್ರತಿಯೊಬ್ಬರೂ ನೈತಿಕತೆ, ಬದ್ಧತೆ ಪಾಲಿಸಬೇಕು. ಆಡಳಿತ ನಡೆಸುವವರ ಇಚ್ಛಾಶಕ್ತಿ ಇಲ್ಲದಿದ್ದರೆ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ಅಭಿವೃದ್ಧಿ ವಿಷಯದಲ್ಲಿ ಪ್ರತಿಯೊಬ್ಬರೂ ಸಣ್ಣ ಸಣ್ಣ ವಿಷಯಗಳ ಬಗ್ಗೆ ಗಮನ ನೀಡಬೇಕು. ಈ ಕೆಲಸ ಪ್ರತಿ ಮನೆಯಿಂದ ಆರಂಭವಾಗಬೇಕು. ಉದಾಹರಣೆಗೆ ಅಗತ್ಯವಿಲ್ಲದಿದ್ದರೂ ಇಡೀ ಮನೆಯ ದೀಪ ಬೆಳಗಿಸುವುದು, ಅನಗತ್ಯವಾಗಿ ಆಹಾರವನ್ನು ಚೆಲ್ಲುವುದು, ಕೊಳಾಯಿ ನೀರನ್ನು ವ್ಯರ್ಥವಾಗಿ ಹರಿಸುವುದು, ಹೀಗೆ ನೀರು, ಆಹಾರ, ವಿದ್ಯುತ್‌ನ್ನು ವ್ಯರ್ಥ ಮಾಡಬಾರದು. ಎಲ್ಲ ಸಂಪನ್ಮೂಲಗಳನ್ನು ಮುಂದಿನ ತಲೆಮಾರಿಗೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ವಿವರಿಸಿದರು.
ಸಮಾರಂಭದಲ್ಲಿ ಡಾ.ಹೆಚ್.ವಿ. ಪಾರ್ಶ್ವನಾಥ, ಪ್ರೊ.ಅಶೋಕ ಪಮಿಡಿ, ಡಾ.ಮಾನಸ ನಾಗಭೂಷಣ, ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು, ಎಂ.ಎಸ್.ರಾಮಯ್ಯ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಸಿರು ಹೆಚ್ಚಿಸಲು ಪ್ರಯತ್ನಿಸಬೇಕು
ಮಹಾನಗರಗಳಲ್ಲಿ ಪ್ರಕೃತಿ ರಕ್ಷಣೆ ದೊಡ್ಡ ಸವಾಲು. ಇತ್ತೀಚೆಗೆ ಪ್ರಕಟವಾದ ವರದಿಯ ಪ್ರಕಾರ ಕರ್ನಾಟಕದಲ್ಲಿ ಶೇ.24ರಷ್ಟು ಅರಣ್ಯವಿದ್ದು, ಮಾರ್ಗಸೂಚಿ ಪ್ರಕಾರ ಕನಿಷ್ಟ ಶೇ.33 ಅರಣ್ಯವಿರಬೇಕು. ಆದ್ದರಿಂದ ಅರಣ್ಯವನ್ನು ಹೆಚ್ಚಿಸಲು ಆಡಳಿತ ನಡೆಸುವವರು, ನಾಗರೀಕರು, ಸಂಘ–ಸಂಸ್ಥೆಗಳು ಮುಂದಾಗಬೇಕು ಎಂದು ಗೋಕುಲ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಡಾ.ಪಾರ್ಶ್ವನಾಥ ಹೆಚ್.ವಿ. ಕರೆ ನೀಡಿದರು. ಬೆಂಗಳೂರಿನಲ್ಲಿ ಒಂದು ದಿನಕ್ಕೆ 7 ಸಾವಿರ ಟನ್ ಕಸ ಸಂಗ್ರಹವಾಗುತ್ತಿದ್ದು, ಇದರಲ್ಲಿ ಶೇ.50 ರಷ್ಟು ಮರುಬಳಕೆ ಮಾಡುವ ಮೂಲಕ ಪರಿಸರ ಹಾನಿಯನ್ನು ಕಡಿಮೆ ಮಾಡಬೇಕು ಎಂದು ವಿವರಿಸಿದರು.
ಆಫ್ರಿಕಾದಲ್ಲಿ ಡಾ.ರಾಜಕುಮಾರ್ ಕುರಿತ ನಾದಯೋಗಿ ಕೃತಿಯ ಮುಖಪುಟ ಬಿಡುಗಡೆ