

ಬೆಂಗಳೂರು: ಕೇರಳದಲ್ಲಿನ ಜೆಡಿಎಸ್ ಘಟಕವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸೋಮವಾರ ವಜಾಗೊಳಿಸಿದ್ದು, ಅಲ್ಲಿಗೆ ಅಡ್ಹಾಕ್ ಸಮಿತಿ ರಚಿಸಿದ್ದಾರೆ.
ಪಕ್ಷ ಸಂಘಟನೆ ಕೆಲಸವನ್ನು ಕೇರಳದಲ್ಲಿ ಸಮರ್ಪಕವಾಗಿ ಮಾಡುತ್ತಿಲ್ಲ. ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇರಳ ಜೆಡಿಎಸ್ ಘಟಕದ ಅಧ್ಯಕ್ಷ ಸಿ.ಕೆ.ನಾಣು ಅವರಿಗೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಿ.ಎಂ.ಫಾರೂಕ್ ಇತ್ತೀಚೆಗೆ ನೋಟಿಸ್ ನೀಡಿದ್ದರು. ಈ ನೋಟಿಸ್ಗೆ ಸಿ.ಕೆ.ನಾಣು ಅವರು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕೇರಳದ ಜೆಡಿಎಸ್ ಘಟಕವನ್ನು ವಜಾಗೊಳಿಸಿ ಅಲ್ಲಿ ಅಡ್ಹಾಕ್ ಸಮಿತಿ ರಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಡ್ಹಾಕ್ ಸಮಿತಿಯಲ್ಲಿ ಯಾರು?: ಮ್ಯಾಥ್ಯೂ ಟಿ.ಥಾಮಸ್ (ಅಧ್ಯಕ್ಷ), ಜೋಸೆ ಥೇಟ್ಟಯಿಲ್ ಹಾಗೂ ಜಮೀಲಾ ಪ್ರಕಾಶಂ (ಉಪಾಧ್ಯಕ್ಷರು), ಬೆನ್ನಿ ಮೂಂಜೆಲಿ, ವಿ.ಮುರುಗಾದಾಸ್ ಮತ್ತು ಬೆಜ್ಲಿ ಜೋಸೆಫ್ (ಪ್ರಧಾನ ಕಾರ್ಯದರ್ಶಿಗಳು) ಹಾಗೂ ಮೊಹಮ್ಮದ್ ಷಾ (ಖಜಾಂಚಿ) ಅಡ್ಹಾಕ್ ಸಮಿತಿಯಲ್ಲಿದ್ದಾರೆ.