

ಕುಂದಾಪುರ: ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಚರ್ಚಿನ ದೇವ ಸ್ತುತಿಯ ಆಯೋಗ ಆಶ್ರಯಲ್ಲಿ ಬಲಿಪೂಜೆ ಅರ್ಪಿಸುವ ಸಂದರ್ಭದಲ್ಲಿ ಆಚರಿಸುವ ದೇವಸ್ತುತಿ ಪ್ರಾರ್ಥನೆಗಳ ವಿಧಿವಿಧಾನಗಳ ತರಬೇತಿ ಕಾರ್ಯಗಾರ ಮಂಗಳವಾರ ನಡೆಯಿತು.
ಮುಡುಬೆಳ್ಳೆಯ ಕರ್ನಾಟಕ ಪ್ರಾಂತೀಯ ಸೆಮಿನರಿ ದಿವ್ಯಧಾಮದ ಆಧ್ಯಾತ್ಮಿಕ ನಿರ್ದೇಶಕ, ಧರ್ಮಗುರು ಬೊನಿಪಾಸ್ ಪಿಂಟೊ ಮತ್ತು ರೋಜರಿ ಮಾತಾ ಚರ್ಚಿನ ಧರ್ಮಗುರು ಪೌಲ್ ರೇಗೊ ಬಲಿಪೂಜೆ ಅರ್ಪಿಸಿ ದೇವ ಸ್ತುತಿಯ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ದೇವ ಸ್ತುತಿ ಆಯೋಗದ ಸಂಚಾಲಕಿ ವಿಕ್ಟೋರಿಯಾ ಡಿಸೋಜ, ಆಯೋಗದ ಸದಸ್ಯರು, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷೆ, ಕಾರ್ಯದರ್ಶಿ, ಸರ್ವ ಆಯೋಗದ ಸಂಯೋಜಕರು, ಧರ್ಮಭಗಿನಿಯರು, ವಾಳೆಯ ಗುರಿಕಾರರು ಮತ್ತಿತರರು ಉಪಸ್ಥಿತರಿದ್ದರು.