ಜೀವನದ ಜ್ಞಾನ ಹೆಚ್ಚಿಸುವ ಮಕ್ಕಳ ಸನ್ಮಿತ್ರ...

Mithra 1
Published on

ರೊ. ಪಿ.ರಾಘವೇಂದ್ರ ಭಟ್​ ಅಭಿಪ್ರಾಯ

ಮಕ್ಕಳಿಗೆ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಶೈಕ್ಷಣಿಕ ಸಾಧನೆಯೊಂದಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಸಾಮಾನ್ಯ ಜ್ಞಾನವೂ ಅಗತ್ಯ. ಪಠ್ಯಕ್ರಮದ ಅಧ್ಯಯನದೊಂದಿಗೆ ಇನ್ನಿತರ ವಿಷಯಗಳ ಮಾಹಿತಿಗಳುಳ್ಳ ಓದುವಿಕೆಯಿಂದ ಸಾಧನೆ ಸುಲಭವಾಗುತ್ತದೆ. ಆ ನಿಟ್ಟಿನಲ್ಲಿ ವಿಜಯವಾಣಿಯ ವಿದ್ಯಾರ್ಥಿಮಿತ್ರವು ಮಕ್ಕಳ ಜೀವನದಲ್ಲಿ ಜ್ಞಾನ ಹೆಚ್ಚಿಸುವ ಸನ್ಮಿತ್ರನಾಗಿದ್ದಾನೆ ಎಂದು ರೋಟರಿ ಮಿಡ್​ಟೌನ್​ ಉಡುಪಿಯ ಅಧ್ಯಕ್ಷ ರೊ. ಪಿ.ರಾಘವೇಂದ್ರ ಭಟ್​ ಅಭಿಪ್ರಾಯಪಟ್ಟರು.

ಉಡುಪಿ ಚಿಟ್ಪಾಡಿಯ ಇಂದಿರಾ ನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಎಸ್​ಎಸ್​ಎಲ್​ಸಿಯ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪರ್ಯಂತ ಪ್ರತಿದಿನವೂ ಉಚಿತವಾಗಿ ನೀಡಲಿರುವ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಜು.16ರಂದು ಮಧ್ಯಾಹ್ನ ವಿತರಿಸಿ ಮಾತನಾಡಿದರು.

ಶಿಕ್ಷಣಕ್ಕೆ ಸದಾ ಸಹಕಾರ

Mithra 3
ಶಾಲೆಯಲ್ಲಿನ ಓದು ಅಂಕ ಗಳಿಸಿ ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋಗಲು ಪೂರಕವಾಗಿ ಲಭಿಸುವ ಜ್ಞಾನವಾಗಿದೆ. ಆದರೆ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೆಚ್ಚಿನ ಜ್ಞಾನದ ಅಗತ್ಯತೆ ಇದ್ದು, ಅದಕ್ಕೆ ವಿದ್ಯಾರ್ಥಿ ಮಿತ್ರ ಅತಿ ಉಪಯುಕ್ತವಾಗಿದೆ. ಮಕ್ಕಳ ಶೈಕ್ಷಣಿಕ ವೃದ್ಧಿ, ಬೆಳವಣಿಗೆಗೆ ರೋಟರಿ ಮಿಡ್​ಟೌನ್​ ಉಡುಪಿ ಸದಾ ಸಹಕಾರ ನೀಡುತ್ತದೆ ಎಂದರು.

ರೊ.ರಾಮದೇವ ಕಾರಂತ, ರೊ. ಭುಜಂಗ ಶೆಟ್ಟಿ, ರೊ. ಎಚ್​.ಜಗನ್ನಾಥ ಶೆಟ್ಟಿ, ಮುಖ್ಯೋಧ್ಯಾಪಕ ಗಿರೀಶ ನಾಯ್ಕ ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿನಿಯರಾದ ವೈಷ್ಣವಿ, ಕನಿಕ್ಷಾ ಪ್ರಾರ್ಥಿಸಿದರು. ಪತ್ರಿಕೆಯ ಉಡುಪಿ ಜಿಲ್ಲಾ ಹಿರಿಯ ವರದಿಗಾರ ಪ್ರಶಾಂತ ಭಾಗ್ವತ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರಸಾರಂಗ ವಿಭಾಗದ ನವೀನ್​ ಎನ್. ವಂದಿಸಿದರು. ಶಾಲೆಯ ಇಂಗ್ಲಿಷ್​ ಶಿಕ್ಷಕಿ ಭವ್ಯಾ ಜಿ. ಸಹಕರಿಸಿದರು.

ಮೊಬೈಲ್​ ಗೀಳು ಮಾನಸಿಕ ಆರೋಗ್ಯ ಹಾಳು ಮಾಡುತ್ತಿದೆ. ಮನೆಯಲ್ಲಿ ಮೊಬೈಲ್​ನಲ್ಲಿ ಬೇಡವಾದದ್ದನ್ನೆಲ್ಲ ನೋಡುವ ಬದಲು ಆ ಸಮಯದಲ್ಲಿ ಕುತೂಹಲ, ಜ್ಞಾನ ಹೆಚ್ಚಿಸುವ ಹಾಗೂ ಶೈಕ್ಷಣಿಕ ಬದುಕಿಗೆ ಸಹಾಯಕವಾಗುವ ವಿದ್ಯಾರ್ಥಿ ಮಿತ್ರವನ್ನು ಓದಿ. ವಿಜಯವಾಣಿ ಪತ್ರಿಕೆಯು ಮಕ್ಕಳಲ್ಲಿ ಓದುವ ಗುಣ ಬೆಳೆಸುತ್ತಿರುವುದು ಶ್ಲಾಘನೀಯ ಕ್ರಮ. | ಗಿರೀಶ ನಾಯ್ಕ. ಮುಖ್ಯೋಧ್ಯಾಪಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net