More

    ಶಾರೂಖ್​ – ಹಿರಾನಿ ಸಿನಿಮಾ ಯಾವಾಗ? ಉತ್ತರ ಇಲ್ಲಿದೆ ನೋಡಿ …

    ಶಾರೂಖ್​ ಖಾನ್​ ಅಭಿನಯದ ‘ಜೀರೋ’ ಚಿತ್ರ ಸೂಪರ್ ಫ್ಲಾಪ್ ಆದ ನಂತರ, ‘ಬಾಲಿವುಡ್​ ಬಾದ್​ಷಾ’ ಅದ್ಯಾಕೋ ಬೇಸರದಿಂದ ಮನೆಯಲ್ಲಿ ಕುಳಿತುಬಿಟ್ಟರು. ಅವರ ಮುಂದಿನ ಚಿತ್ರ ಯಾವುದು? ಯಾವಾಗ ಶುರುವಾಗುತ್ತದೆ? ಎಂಬ ಹಲವು ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುತ್ತಲೇ ಇತ್ತು.

    ಈ ಮಧ್ಯೆ ‘ಮುನ್ನಾಭಾಯ್ ಎಂ.ಬಿ.ಬಿ.ಎಸ್’, ‘ಥ್ರೀ ಈಡಿಯಟ್ಸ್’, ‘ಪಿಕೆ’ ಖ್ಯಾತಿಯ ರಾಜಕುಮಾರ್ ಹಿರಾನಿ ಜತೆಗೆ ಶಾರೂಖ್ ಖಾನ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇದ್ದರೂ, ಇಬ್ಬರೂ ಆ ಬಗ್ಗೆ ತುಟಿಕ್ ಪಿಟಿಕ್ ಎಂದಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ಶಾರೂಖ್, ರಾಜು ಹಿರಾನಿ ಜತೆಗೆ ಸಿನಿಮಾ ಮಾಡುತ್ತಿರುವ ಹಿಂಟ್ ಕೊಟ್ಟಿದ್ದರು. ಆದರೆ, ಯಾವಾಗ ಶುರು ಎಂದು ಹೇಳಿರಲಿಲ್ಲ.

    ಇದನ್ನೂ ಓದಿ: ‘ಪಾರ್ವತಿ’ಯನ್ನು ದತ್ತು ಪಡೆದ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​

    ಈಗ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಬಹುಶಃ ಈ ವರ್ಷದ ಕೊನೆಯಲ್ಲಿ ಶಾರೂಖ್​ ಮತ್ತು ಹಿರಾನಿ ಕಾಂಬಿನೇಷನ್​ನ ಚಿತ್ರ ಶುರುವಾಗಿರಬೇಕಿತ್ತು. ಆದರೆ, ಕರೊನಾ ಹಾವಳಿ ಹೆಚ್ಚಿರುವುದರಿಂದ, ಚಿತ್ರ 2021ರ ಏಪ್ರಿಲ್​ನಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

    ಪ್ರಮುಖವಾಗಿ, ಈ ಚಿತ್ರದ ಬಹುಭಾಗದ ಚಿತ್ರೀಕರಣ ಕೆನಡಾ ಮತ್ತು ಪಂಜಾಬ್​ನಲ್ಲಿ ನಡೆಯಲಿದೆಂತೆ. ಇವೆರೆಡರ ಜನವರಿಯಲ್ಲಿ ಲೊಕೇಶನ್​ ನೋಡಲಿಕ್ಕೆ ಕೆನಡಾ ಮತ್ತು ಪಂಜಾಬ್​ ಕಡೆಗೆ ಹಿರಾನಿ ಮತ್ತು ತಂಡ ಪ್ರಯಾಣ ಬೆಳೆಸಲಿದೆಯಂತೆ. ಆ ನಂತರ ಏಪ್ರಿಲ್​ನಿಂದ ಚಿತ್ರೀಕಣ ಶುರುವಾಗಲಿದೆ.

    ಇದನ್ನೂ ಓದಿ: ನನ್ನ ಮುಂದಿನ ಚಿತ್ರಕ್ಕೂ ನೀವೇ ಹಾಡ್ತೀರಾ ಅಂತ ನಂಬಿಕೆ ಇದೆ …

    ಸದ್ಯಕ್ಕೆ ಹಿರಾನಿ ತಮ್ಮ ತಂಡದವರ ಜತೆಗೆ ಕೂತು, ಪ್ರೀ-ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಮತ್ತು ಸಂಗೀತದ ಕೆಲಸಗಳನ್ನು ಮುಗಿಸಿ, ಆ ನಂತರ ಮುಂದಿನ ವರ್ಷ ಶೂಟಿಂಗ್​ ಮಾಡಿ, ಎಲ್ಲಾ ಅಂದುಕೊಂಡಂತೆ ಆದರೆ, 2021ರ ಕೊನೆಗೆ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಪ್ಲಾನ್​ ಮಾಡಲಾಗುತ್ತಿದೆ.

    ಹಾಗೆ ನೋಡಿದರೆ, ರಾಜಕುಮಾರ್ ಹಿರಾನಿ ಮತ್ತು ಶಾರೂಖ್ ಖಾನ್ 15 ವರ್ಷಗಳ ಹಿಂದೆಯೇ ಜತೆಗೆ ಚಿತ್ರ ಮಾಡಬೇಕಿತ್ತು. ‘ಮುನ್ನಾಭಾಯ್ ಎಂ.ಬಿ.ಬಿ.ಎಸ್’ ಕಥೆಯನ್ನು ಹಿರಾನಿ ಮೊದಲು ತೆಗೆದುಕೊಂಡು ಹೋಗಿದ್ದೇ ಶಾರೂಖ್ ಖಾನ್ ಬಳಿ. ಆದರೆ, ‘ಕಿಂಗ್ ಖಾನ್’ ಅಷ್ಟೇನೂ ಆಸಕ್ತಿ ತೋರಿಸಲಿಲ್ಲವಂತೆ. ಆ ನಂತರ ‘ಥ್ರೀ ಈಡಿಯಟ್ಸ್’ಗೆ ಸಹ ಶಾರೂಖ್ ಅವರನ್ನ ಅಪ್ರೋಚ್ ಮಾಡಿದ್ದಾರೆ ಹಿರಾನಿ. ಆಗಲೂ ಕಾರಣಾಂತರಗಳಿಂದ ವರ್ಕೌಟ್ ಆಗಲಿಲ್ಲ. ಈಗ ಹಿರಾನಿ ಮತ್ತು ಶಾರೂಖ್​ ಕೊನೆಗೂ ಜತೆಯಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಚಾರ ಅವರಿಬ್ಬರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.

    ಕಂಗನಾ ಮೊದಲು ಪದ್ಮಶ್ರೀ ಪ್ರಶಸ್ತಿ ವಾಪಸ್​ ಮಾಡ್ಲಿ … ಆದಿತ್ಯ ಪಂಚೋಲಿ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts