

ಬೆಂಗಳೂರು:ಹಿಂಗಾರು ಮಳೆ ಮುಗಿದರೂ ರಾಜ್ಯದಲ್ಲಿ ಚಳಿ ಇನ್ನಷ್ಟು ಜಾಸ್ತಿಯಾಗುತ್ತಿದೆ.ವಾಡಿಕೆಗಿಂತ ಅಧಿಕ ಮಳೆ ಸುರಿದಿರುವುದು, ಭೂಮಿಯಲ್ಲಿ ತೇವಾಂಶ ಇರುವುದು, ಮೋಡ ಕವಿದ ವಾತಾವರಣ, ಉತ್ತರದಿಂದ ದಣದತ್ತ ಗಾಳಿ ಬೀಸುತ್ತಿರುವುದೂ ಸೇರಿ ವಿವಿಧ ಕಾರಣಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಳಿತವಾಗುತ್ತಿದ್ದು, ಥಂಡಿ ವಾತಾವರಣ ಮುಂದುವರಿದಿದೆ.
ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತವಾಗಿರುವ ಕಾರಣ ರಾತ್ರಿ ಬೆಚ್ಚಿನ ವಾತಾವರಣ ಇರುವುದಿಲ್ಲ. ಗರಿಷ್ಠ ತಾಪಮಾನದಲ್ಲಿಯೂ ವಾಡಿಕೆಗಿಂತ ಉಷ್ಣಾಂಶ ಇಳಿಮುಖವಾದ ಹಿನ್ನೆಲೆಯಲ್ಲಿ ಹಗಲಿನ ವೇಳೆ ಬಿಸಿಲಿನ ಪ್ರಖರತೆ ಅಷ್ಟೇನೂ ಇಲ್ಲ.ಇದರಿಂದಾಗಿ ಚಳಿಯ ತೀವ್ರತೆ ಜಾಸ್ತಿ ಕಾಣಿಸಲಾರಂಭಿಸಿದೆ. ಬಾಗಲಕೋಟೆ, ಹೊನ್ನಾವರ, ಮಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ 2-3 ಡಿ.ಸೆ.ಉಷ್ಣಾಂಶ ಇಳಿಮುಖವಾಗಿದೆ.
ಬೆಂಗಳೂರುಗಿಂತ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಚಳಿ ಹೆಚ್ಚಿದೆ. ವಿಜಯಪುರ, ಬೀದರ್, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಹಾವೇರಿ, ಉಡುಪಿ, ದಣಕನ್ನಡ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ರಾಮನಗರ, ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ರಾತ್ರಿ ವೇಳೆ ಚಳಿ ಅಧಿಕವಾಗಿದೆ. ಸಂಜೆ,ಮುಂಜಾನೆ ಇಬ್ಬನಿ ಬೀಳುತ್ತಿದ್ದು, ಮೋಡ ಮುಸುಕಿದ ವಾತಾವರಣ ಇದ್ದಾಗ ಹಗಲಿನಲ್ಲೂ ಹೆಚ್ಚು ಚಳಿ ಅನುಭವಾಗುತ್ತದೆ. ತಂಪಾದ ಗಾಳಿ ಬೀಸಿದರೂ ಚಳಿ ಜಾಸ್ತಿ ಇರುತ್ತದೆ
ಲಾ-ನಿನಾ ಪರಿಣಾಮ:
ಈ ಬಾರಿ ತುಸು ಚಳಿ ಹೆಚ್ಚು ಇರುವುದಕ್ಕೆ "ಲಾ&ನಿನಾ' ಕಾರಣವಾಗಿದೆ. ಪೂರ್ವ ಹಾಗೂ ಮಧ್ಯ ೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾದರೆ "ಲಾ&ನಿನಾ'ಉಂಟಾಗುತ್ತದೆ. ಇದೀಗ "ಲಾ-ನಿನಾ' ಪರಿಣಾಮದಿಂದ ಈಶಾನ್ಯ ಮಾರುತಗಳು ದುರ್ಬಲಗೊಂದು ಚಳಿ ಹೆಚ್ಚಳಕ್ಕೆ ಕಾರಣವಾಗಿದೆ. ಬಂಗಾಳದ ಉಪಸಾಗರದಿಂದ ಗಾಳಿ ಬೀಸಿದರೆ ಅಥವಾ ದಣದ ಹಿಂದೂ ಮಹಾಸಾಗರದಿಂದ ಗಾಳಿ ಬೀಸುತ್ತಿರುವರಿಂದ ಕನಿಷ್ಟ ಹಾಗೂ ಗರಿಷ್ಟ ತಾಪಮಾನದಲ್ಲಿ ಉಷ್ಣಾಂಶ ಏರಿಳಿತವಾಗಿದೆ. ಚಳಿ ಅವಧಿಯಲ್ಲಿ ಉತ್ತರ ಭಾರತದಿಂದ ದಣ ಭಾರತದ ಕಡೆಗೆ ಪ್ರಬಲವಾಗಿ ಶೀತ ಗಾಳಿ ಬೀಸಿದರೆ ನೆಗಡಿ ಮತ್ತು ಕೆಮ್ಮು ಸೇರಿ ಇತರೆ ಕಾಯಿಲೆಗಳು ಬಾಧಿಸಲಿವೆ. ಮುಂಜಾನೆ 4ರಿಂದ 7ಗಂಟೆ ಅವಧಿಯಲ್ಲಿ ಚಳಿ ತೀವ್ರತೆ ಹೆಚ್ಚಿರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.