More

    ಐಶ್ವರ್ಯ ರೈ ಬಗ್ಗೆ ಅವಹೇಳನಕಾರಿ ಹೇಳಿಕೆ: ಕ್ಷಮೆಯಾಚಿಸಿದ ಪಾಕ್ ಮಾಜಿ ಕ್ರಿಕೆಟಿಗ

    ನವದೆಹಲಿ: ನಟಿ ಐಶ್ವರ್ಯ ರೈ ಬಚ್ಚನ್ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಎಚ್ಚೆತ್ತುಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

    ಇದನ್ನೂ ಓದಿ: ಕ್ರಿಕೆಟ್ ದೇವರ ದಾಖಲೆ ಮುರಿದ ವಿರಾಟ್​; 20 ವರ್ಷಗಳ ಹಿಂದಿನ ರೆಕಾರ್ಡ್​ ಬ್ರೇಕ್ ಮಾಡಿದ ಕೊಹ್ಲಿ

    ರಜಾಕ್​ ಹೇಳಿಕೆ ಬಗ್ಗೆ ಕ್ರಿಕೆಟಿಗರು ಸೇರಿದಂತೆ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಮಂಗಳವಾರದ ತಡರಾತ್ರಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, 27 ಸೆಕೆಂಡುಗಳ ವೀಡಿಯೊದಲ್ಲಿ, ರಜಾಕ್ ಕ್ರಿಕೆಟ್ ತರಬೇತಿಯ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ‘ಉದ್ದೇಶಪೂರ್ವಕವಲ್ಲದ’ ಬಾಯ್ತಪ್ಪಿ ಹೇಳಿಕೆ ನೀಡಿದ್ದೇನೆ. ಇದಕ್ಕೆ ಐಶ್ವರ್ಯ ರೈ ಅವರ ಬಳಿ ವೈಯಕ್ತಿಕವಾಗಿ ಕ್ಷಮೆ ಕೇಳುತ್ತಿರುವುದಾಗಿ ತಿಳಿಸಿದ್ದಾರೆ.

    ಹೇಳಿಕೆ ನೀಡುವಾಗ ಸಹ ಮಾಜಿ ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ ಮತ್ತು ಉಮರ್ ಗುಲ್ ಕೂಡ ಜೊತೆಗೆ ಕುಳಿತಿದ್ದರು, ಅವರು ಈ ಹೇಳಿಕೆಯನ್ನು ನೋಡಿ ಅವರು ನಗುತ್ತಿದ್ದರು. ಕ್ರಿಕೆಟ್ ತರಬೇತಿ ಮತ್ತು ಉದ್ದೇಶಗಳ ಕುರಿತು ಚರ್ಚಿಸುತ್ತಿದ್ದೆವು. ಬಾಯ್ತಪ್ಪಿ, ತಪ್ಪಾಗಿ ಐಶ್ವರ್ಯಾ ರೈ ಹೆಸರನ್ನು ತೆಗೆದುಕೊಂಡೆ. ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ನಾನು ಬೇರೆ ಉದಾಹರಣೆಯನ್ನು ನೀಡಬೇಕಾಗಿತ್ತು, ಆದರೆ ತಪ್ಪಾಗಿ ಅವರ ಹೆಸರನ್ನು ಬಳಸಿದ್ದೇನೆ,” ಎಂದು ರಜಾಕ್ ಅವರು ಯೂಟ್ಯೂಬ್‌ನ ಕ್ಯಾಪಿಟಲ್ ಟಿವಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

    ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಎದುರಾಳಿ ಯಾರಾಗಬೇಕು? ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನದ ಹೇಗಿದೆ ಎಂದು ಮಾತನಾಡುವ ಸಂದರ್ಭದಲ್ಲಿ, “ನಾನು ಐಶ್ವರ್ಯ ರೈ ಅವರನ್ನು ಮದುವೆಯಾಗಿ, ನಮಗೆ ಸುಂದರವಾದ ಮಕ್ಕಳಾಗುತ್ತವೆ ಎಂದು ನೀವು ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಹೀಗಾಗಿ ಸರಿಯಾದ ಉದ್ದೇಶ ಇಟ್ಟುಕೊಳ್ಳಬೇಕು. ಮೊದಲು ನಿಮ್ಮ ಉದ್ದೇಶಗಳನ್ನು ಸರಿಪಡಿಸಿಕೊಳ್ಳಬೇಕು” ಎಂದು ರಜಾಕ್ ಹೇಳಿದ್ದರು.

    ರಜಾಕ್ ಹೇಳಿಕೆಗೆ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದರು. “ರಝಾಕ್ ಮಾಡಿದ ಅನುಚಿತ ಜೋಕ್ ಹೋಲಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಯಾವ ಹೆಣ್ಣಿಗೂ ಈ ರೀತಿ ಅಗೌರವ ತೋರಬಾರದು. ಅವರ ಪಕ್ಕದಲ್ಲಿ ಕುಳಿತಿರುವ ಜನರು ಚಪ್ಪಾಳೆ ತಟ್ಟುವ ಬದಲು ತಕ್ಷಣವೇ ಧ್ವನಿ ಎತ್ತಬೇಕಿತ್ತು” ಎಂದು ಅಖ್ತರ್ ಎಕ್ಸ್‌ನಲ್ಲಿ ಹೇಳಿದ್ದರು.

    ಜಮೀಲ್​ಗೆ ನಶೆ ಏರಿದೆ: ಇದಕ್ಕೂ ಮೊದಲು, ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಅವರ ಹಳೆಯ ವೀಡಿಯೊ ವೈರಲ್ ಆಗಿದ್ದು, ಮಂಗಳವಾರ ಮತ್ತೊಂದು ವಿವಾದವು ಭುಗಿಲೆದ್ದಿತು, ಅಲ್ಲಿ ಅವರು ಮೌಲಾನಾ ತಾರಿಕ್ ಜಮೀಲ್ ಅವರ ಉಪದೇಶದ ನಂತರ ಭಾರತದ ಸ್ಟಾರ್ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರಗೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಹರ್ಭಜನ್ ಸಿಂಗ್, ನೀವು ಯಾವ ರೀತಿಯ ನಶೆಯಲ್ಲಿ ಮಾತನಾಡುತ್ತಿದ್ದೀರಿ? ನಾನು ಹೆಮ್ಮೆಯ ಭಾರತೀಯ ಮತ್ತು ಹೆಮ್ಮೆಯ ಸಿಖ್. ಈ ಮೂರ್ಖರು ಏನು ಬೇಕಾದರೂ ಮಾತನಾಡುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಒಂದೇ ಇನ್ನಿಂಗ್ಸ್​ನಲ್ಲಿ ‘ಕ್ರಿಕೆಟ್ ದೇವರ’ 2 ದಾಖಲೆ ಮುರಿದ ಕೊಹ್ಲಿ!; ಜತೆಗೆ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದ ವಿರಾಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts