

ಮುಂಬೈ: ಜೂನ್ 14, 2020 ರಂದು ಕೊನೆಯುಸಿರೆಳೆದ ಬಾಲಿವುಡ್ನ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಅಭಿಮಾನಿಗಳು ಇದು ಆತ್ಮಹತ್ಯೆಯಲ್ಲ ಎಂದು ಶಂಕಿಸಿದ್ದಾರೆ. ಪ್ರಕರಣವನ್ನು ಸೂಕ್ತ ತನಿಖೆಗಾಗಿ ಸಿಬಿಐಗೆ ವಹಿಸಲಾಗಿದ್ದು, ಇದೀಗ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪ್ರಕರಣದ ಕುರಿತು ಹೊಸ ವಿಚಾರ ರಿವೀಲ್ ಮಾಡಿದ್ದಾರೆ.
ಹೌದು, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸಿಬಿಐ ತನಿಖೆಯ ಕುರಿತು ಕೇಳಿದಾಗ, ದೇವೇಂದ್ರ ಫಡ್ನವಿಸ್, “ಮೊದಲಿಗೆ, ಕೆಲವು ಜನರಿಂದ ಮಾತ್ರ ಮಾಹಿತಿ ಕೇಳಿ ಪಡೆಯಲಾಯಿತು. ಆದರೆ ಮತ್ತೆ ಕೆಲವರು ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ಪ್ರತಿಪಾದಿಸಿದರು. ಆದ್ದರಿಂದ ನಾವು ಅವರ ಬಳಿ ಸಾಕ್ಷ್ಯವನ್ನು ಪೊಲೀಸರಿಗೆ ಸಲ್ಲಿಸುವಂತೆ ವಿನಂತಿಸಿದೆವು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ" ಎಂದು ಹೇಳಿದರು.
ಪ್ರಸ್ತುತ, ನಾವು ಪ್ರಸ್ತುತಪಡಿಸಿರುವ ಸಾಕ್ಷ್ಯಗಳ ವಿಶ್ವಾಸಾರ್ಹತೆ ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಪ್ರಕರಣದ ಅಂತಿಮ ಫಲಿತಾಂಶದ ಕುರಿತು ಯಾವುದೇ ಕಾಮೆಂಟ್ಗಳನ್ನು ನೀಡುವುದು ಅಪಕ್ವವೆನಿಸುತ್ತದೆ ಎಂದು ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಪ್ರತಿಭಾನ್ವಿತ ನಟ. ದೂರದರ್ಶನದಲ್ಲಿ ಕಿಸ್ ದೇಶ್ ಮೇ ಹೈ ಮೇರಾ ದಿಲ್ನಲ್ಲಿ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಜನಪ್ರಿಯ ಧಾರವಾಹಿ ಪವಿತ್ರ ರಿಶ್ತಾದಲ್ಲಿ ನಾಯಕರಾಗಿ ನಟಿಸಿದರು. ಟೆಲಿವಿಷನ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಂತರ, ಬಾಲಿವುಡ್ನಲ್ಲಿ ಕೈ ಪೋ ಚೆ ಮೂಲಕ ಅಭಿಮಾನಿಗಳ ಮೆಚ್ಚುಗೆ ಗಳಿಸಿದರು. ನಂತರ, ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ, ಕೇದಾರನಾಥ್, ಚಿಚೋರೆ, ಪಿಕೆಯಂತಹ ಹಲವಾರು ಹಿಟ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ರಂಜಿಸಿರುವ ಧೋನಿ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದರು.
ಆದರೆ ಸುಶಾಂತ್ ಜೂನ್ 2020 ರಲ್ಲಿ ಮುಂಬೈನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾದ ನಂತರ ಸಾವಿನ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಯಿತು. ಅವರ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಪ್ರಧಾನ ಆರೋಪಿ ಎಂದು ಬಂಧಿಸಲಾಯಿತು. ಸುಶಾಂತ್ ಸಾವಿಗೂ ಕೆಲವು ದಿನಗಳ ಹಿಂದೆ, ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಕೂಡ ಶವವಾಗಿ ಪತ್ತೆಯಾಗಿದ್ದರು.