ಆವರಣ ಗೋಡೆ ನೆಲಸಮ, 17 ಮಂದಿ ಮೇಲೆ ಕೇಸ್

New Project (27)
Published on

ಗುರುಪುರ: ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿ ವಾರ್ಡ್‌ನ ಶ್ರೀ ವೈದ್ಯನಾಥ ನಗರದಲ್ಲಿ ರಸ್ತೆ ವಿಸ್ತರಣೆ ನೆಪವೊಡ್ಡಿ ಖಾಸಗಿ ವ್ಯಕ್ತಿಯೊಬ್ಬರ ಮನೆ ಆವರಣ ಗೋಡೆ (ಕಂಪೌಂಡ್) ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿ ಮಂಗಳೂರು ಗ್ರಾಮಾಂತರ ಪೊಲೀಸರು 17 ಮಂದಿ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

ಮನಪಾ ನೋಟಿಸ್ ಅಥವಾ ಸರ್ಕಾರಕ್ಕೆ ಸಂಬಂಧಿಸಿದವರ ನಿರ್ದೇಶನವಿಲ್ಲದೆ ಮಾ.14ರಂದು ಏಕಾಏಕಿಯಾಗಿ ಆವರಣ ಗೋಡೆ ಧ್ವಂಸಗೊಳಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಆವರಣ ಗೋಡೆ ನೆಲಸಮಗೊಳಿಸಲಾದ ವೇಳೆ ದುಷ್ಕರ್ಮಿಗಳ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲಿದ್ದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಅಶ್ಲೀಲ ಪದ ಬಳಸಿ ಬೈದಿದ್ದಾನೆ ಎಂದು ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net