

ನವದೆಹಲಿ: ಕಿಡ್ನಿ ವೈಫಲ್ಯದಿಂದ ದೆಹಲಿ ಮೃಗಾಲಯದಲ್ಲಿ ಮೃತಪಟ್ಟಿದ್ದ ಕಲ್ಪನಾ ಹೆಸರಿನ ಬಿಳಿಹುಲಿಯಲ್ಲಿ ಕರೊನಾ ನಗೆಟಿವ್ ಪತ್ತೆಯಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಪನ ಕಿಡ್ನಿ ವೈಫಲ್ಯವಲ್ಲದೇ, ಇತರೆ ವಯೋಸಹಜ ಕಾಯಿಲೆಗಳಿಂದ ಸಾವಿಗೀಡಾಗಿದೆ. ಕರೊನಾದಿಂದಲೇ ಸಾವಿಗೀಡಾಗಿದೆ ಎನ್ನವುದಕ್ಕೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದಾಗ್ಯೂ ಮೃಗಾಲಯ ಆಡಳಿತ ಮಂಡಳಿಯ ಸಲಹೆಯಂತೆ ಜೈವಿಕ ಭದ್ರತೆಗಾಗಿ ಹುಲಿಯ ಸ್ಯಾಂಪಲ್ ಸಂಗ್ರಹಿಸಿ ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್ಐ)ಗೆ ಕಳುಹಿಸಲಾಯಿತು. ಇದೀಗ ಹುಲಿಯಲ್ಲಿ ಕೋವಿಡ್-19 ನಗೆಟಿವ್ ಪತ್ತೆಯಾಗಿದೆ ಎಂದು ಐವಿಆರ್ಐ ಖಚಿತ ಪಡಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಲ್ಪನಾ ಬುಧವಾರ ಸಂಜೆ 6.30ಕ್ಕೆ ಸಾವಿಗೀಡಾಯಿತು. ಗುರುವಾರ ಅದರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಸರ್ಕಾರದ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡ ಕೆಲವೇ ಮಂದಿ ಸೇರಿ ಅಂತ್ಯಕ್ತಿಯೆಯನ್ನು ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)