ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಗೆ ಗುಂಡೇಟು!

Delhi Crime
Published on

ನವದೆಹಲಿ: ಡಿಜೆ ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡುವಂತೆ ಹೇಳಿದ ಮಹಿಳೆ ಮೇಲೆ ನೆರೆಯ ಮನೆಯವರು ಗುಂಡು ಹಾರಿಸಿರುವ ಘಟನೆ ವಾಯುವ್ಯ ದೆಹಲಿಯ ಸಿರಸ್​​​ಪುರದಲ್ಲಿ ನಡೆದಿದೆ.

ಘಟನೆ ತಡರಾತ್ರಿ 12:15ಕ್ಕೆ ನಡೆದಿದ್ದು ಗಾಯಗೊಂಡಿರುವ ಮಹಿಳೆಯನ್ನು ರಂಜು ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಅಮಿತ್​ ಹಾಗೂ ಹರೀಶ್​ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ(ಉತ್ತರ) ರವಿಕುಮಾರ್​ ಸಿಂಗ್​ ಕುವಾನ್​ ಪೂಜಾನ್​​ ಸಮಯದಲ್ಲಿ ಜೋರಾಗಿ ಡಿಜೆ ಮ್ಯೂಸಿಕ್​ ಹಾಕಲಾಗಿತ್ತು. ಈ ವೇಳೆ ಗಾಯಗೊಂಡಿರುವ ಮಹಿಳೆ ಸೌಂಡ್​ ಕಡಿಮೆ ಮಾಡುವಂತೆ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಆರೋಫಿಗಳು ಮಹಿಳೆ ಮೇಲೆ ಗುಂಡು ಹಾರಿಸಿದ್ದಾರೆ.

ಘಟನೆ ಸಂಬಂಧ ಮಹಿಳೆಯಿಂದ ಹೇಳಿಕೆ ಪಡೆಯಲು ಯತ್ನಿಸಿದ್ದೆವು. ಆದರೆ, ಕತ್ತಿಗೆ ಗುಂಡೇಟು ಬಿದ್ದಿದ ಕಾರಣ ಮಹಿಳೆ ಮಾತನಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದ ಕಾರಣ ಆರೋಪಿಗಳಾದ ಹರೀಶ್​ ಹಾಗೂ ಅಮಿತ್​ ವಿರುದ್ಧ ಭಾರತ ದಂಡ ಸಂಹಿತೆ(IPC Section) 307(ಕೊಲೆ ಯತ್ನ), 34(ಸಾಮಾನ್ಯ ಉದ್ದೇಶ), 27(ಶಸ್ತ್ರಾಸ್ತ್ರ ಕಾಯ್ದೆ) ಅಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮನಡೆಸಲಾಗುತ್ತಿದೆ ಎಂದು ಡಿಸಿಪಿ ರವಿಕುಮಾರ್​ ಸಿಂಗ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net