More

    ‘ದಿ ಕಾಶ್ಮೀರ್​ ಫೈಲ್ಸ್​’ ಎಫೆಕ್ಟ್! ಐಡಿ ಇದ್ರೂ ಹೋಟೆಲ್​ನಲ್ಲಿ ರೂಮ್​ ನಿರಾಕರಣೆ ಆರೋಪ?

    ನವದೆಹಲಿ: ಕಾಶ್ಮೀರಿ ವ್ಯಕ್ತಿ ಎಂಬ ಕಾರಣಕ್ಕೆ ಓಯೋ ಹೋಟೆಲ್​​ ಒಂದರಲ್ಲಿ ವಸತಿ ನಿರಾಕರಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

    ವಿಡಿಯೋದಲ್ಲಿ ಇರುವಂತೆ, ಹೋಟೆಲ್ ರಿಸೆಪ್ಶನ್‌ನಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಕಾಶ್ಮೀರಿ ನಿವಾಸಿಗೆ ಆಧಾರ್ ಕಾರ್ಡ್ ಸೇರಿದಂತೆ ತನ್ನ ಗುರುತಿನ ಪುರಾವೆಗಳನ್ನು ತೋರಿಸಿದ ನಂತರವೂ ಚೆಕ್-ಇನ್ ಮಾಡಲು ಅನುವು ಮಾಡಿಲ್ಲ. ಈ ವ್ಯಕ್ತಿ ಆನ್​ಲೈನ್​ನಲ್ಲಿ ರೂಂ ಬುಕ್​ ಮಾಡಿದ್ದರು ಎನ್ನಲಾಗ್ತಿದೆ.

    ಈ ವೇಳೆ ಮಹಿಳೆ ಹೋಟೆಲ್​ನ ಹಿರಿಯ ಸಿಬ್ಬಂದಿಯೊಂದಿಗೆ ಈ ಸಂಬಂಧ ಮಾತನಾಡಿದ್ದು, ಹೋಟೆಲ್‌ನಲ್ಲಿ ಕಾಶ್ಮೀರಿ ನಿವಾಸಿಗಳಿಗೆ ಅವಕಾಶ ನೀಡದಂತೆ ದೆಹಲಿ ಪೊಲೀಸರು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ಕಾಣಬಹುದು. ಜಮ್ಮು ಮತ್ತು ಕಾಶ್ಮೀರ್​ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಘಟನೆಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅವರು ಇದು ‘ ದಿ ಕಾಶ್ಮೀರ್​ ಫೈಲ್ಸ್​’ ಪರಿಣಾಮ ಎಂದಿದ್ದಾರೆ.

    ನಂದಿಗಿರಿಧಾಮಕ್ಕೆ ವಿಧಿಸಿದ್ದ ವೀಕೆಂಡ್ ಕರ್ಪ್ಯೂ ತೆರವು; ಆದ್ರೆ ಈ ಷರತ್ತುಗಳು ಅನ್ವಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts