ಮದ್ಯದ ಮೇಲಿನ ಶೇ.70 ಕರೊನಾ ಶುಲ್ಕ ರದ್ದು, ಕಡಿಮೆಯಾಯಿತು ಮದ್ಯದ ಬೆಲೆ

liquor
Published on

ನವದೆಹಲಿ: ಕೋವಿಡ್​-19 ಲಾಕ್​ಡೌನ್​ ತೆರವುಗೊಳಿಸಿ, ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ಮದ್ಯದ ಮೇಲೆ ವಿಧಿಸಿದ್ದ ಶೇ.70 ಕರೊನಾ ಶುಲ್ಕವನ್ನು ದೆಹಲಿ ಸರ್ಕಾರ ರದ್ದುಗೊಳಿಸಿದೆ. ಈ ನಿರ್ಧಾರ ಜೂನ್​ 10ರಿಂದ (ಬುಧವಾರ) ಜಾರಿಗೆ ಬರಲಿದ್ದು, ಮದ್ಯದ ದರಗಳು ಗಣನೀಯವಾಗಿ ಕಡಿಮೆಯಾಗಲಿವೆ.

ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ದೆಹಲಿ ಸರ್ಕಾರ ಮದ್ಯದ ಬಾಟಲಿಯ ಗರಿಷ್ಠ ಮಾರಾಟ ಬೆಲೆಯ (ಎಂಆರ್​ಪಿ) ಮೇಲೆ ಶೇ.70 ಕರೊನಾ ಶುಲ್ಕ ವಿಧಿಸಿತ್ತು. ಆದರೆ ಈಗ ಈ ನಿರ್ಧಾರವನ್ನು ಹಿಂಪಡೆಯಲಾಗಿದ್ದು, ಎಲ್ಲ ವರ್ಗಗಳ ಮದ್ಯದ ಮೇಲೆ ಶೇ.20ರಿಂದ 25 ಮೌಲ್ಯವರ್ಧಿತ ತೆರಿಗೆ (ವ್ಯಾಟ್​) ಅನ್ನು ಹೆಚ್ಚಿಸಲಾಗಿದೆ.

ಭಾನುವಾರ ನಡೆದ ದೆಹಲಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಲಾಕ್​ಡೌನ್​ ತೆರವು ನಂತರದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದ ಮದ್ಯದ ಬೆಲೆಗಳಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net