More

    IPL 2024, CSKvsDC: ಸಿಎಸ್​ಕೆಗೆ 192 ರನ್​ ಗುರಿ ನೀಡಿದ ಡೆಲ್ಲಿ! ಗೆಲ್ಲಲು ಬರಬೇಕು ಸಿಕ್ಸರ್​ಗಳ ಅಬ್ಬರ

    ಚೆನ್ನೈ: ಇಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 13ನೇ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್​ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ರಿಷಭ್ ಪಂತ್ ಕ್ಯಾಪ್ಟನ್ಸಿಯ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಿದೆ. ಟಾಸ್ ಗೆದ್ದ ಡೆಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, 20 ಓವರ್​​ಗಳಲ್ಲಿ 191 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.

    ಆರಂಭಿಕ ಬ್ಯಾಟ್ಸ್​ಮನ್​ಗಳಾದ ಡೇವಿಡ್​ ವಾರ್ನರ್​ ಮತ್ತು ಪೃಥ್ವಿ ಷಾ ಜೋಡಿ ಉತ್ತಮ ಓಪನಿಂಗ್ ಕೊಟ್ಟಿದ್ದು, ಸಿಕ್ಸರ್​ಗಳ ಸುರಿಮಳೆ ಹರಿಸಿದ ಈ ಜೋಡಿಯ ಜತೆಯಾಟ 95 ರನ್​ಗಳ ಕೊಡುಗೆ ನೀಡಿತು. ತದನಂತರ ಕ್ರೀಸ್​ಗೆ ಬಂದ ಮಿಚೆಲ್ ಮಾರ್ಶ್​ ಸಿಕ್ಸರ್​ಗಳನ್ನು ಸಿಡಿಸಿ 12 ಎಸೆತಗಳಲ್ಲಿ ಕೇವಲ 18 ರನ್​ಗೆ ಔಟ್ ಆದರು. ಇನ್ನು ನಾಯಕ ರಿಷಭ್ ಪಂತ್ ಬ್ಯಾಟಿಂಗ್ ಅಬ್ಬರದಿಂದ 191 ರನ್​ ತಲುಪುವಲ್ಲಿ ಡೆಲ್ಲಿ ಶಕ್ತವಾಯಿತು.

    192 ರನ್ ಗುರಿ ನೀಡಿರುವ ಡೆಲ್ಲಿ ಎದುರು ಸಿಂಹ ಪಡೆಯ ಬ್ಯಾಟ್ಸ್​ಮನ್​ಗಳು ಹೇಗೆ ಅಬ್ಬರಿಸಲಿದ್ದಾರೆ? ಡೆಲ್ಲಿ ಬಾಯ್ಸ್​ ಸಿಡಿಸಿದ ಸಿಕ್ಸರ್​​ಗಳ ಸುರಿಮಳೆ ಹರಿಸಲಿದ್ದಾರಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts