ನೇಣು ಬಿಗಿದ ಸ್ಥಿತಿಯಲ್ಲಿ ಕೆಫೆ ಮಾಲೀಕನ ಮೃತದೇಹ ಪತ್ತೆ; ತನಿಖೆ ಆರಂಭಿಸಿದ ಪೊಲೀಸರು | Cafe Owner Suicide

Untitled design (93)
Published on

ನವದೆಹಲಿ: ಉದ್ಯಮಿಯೊಬ್ಬರ ಮೃತದೇಹ ಅವರ ಸ್ವಂತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನ್ನ ಪತ್ನಿಯಿಂದ ವಿಚ್ಛೇದನದ ಪ್ರಕರಣದ ನಡುವೆಯೇ ಅವರು ಆತ್ಮಹತ್ಯೆ(Cafe Owner Suicide) ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಂಗಳವಾರ(ಡಿಸೆಂಬರ್​​​​ 31) ಸಂಜೆ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಪುನೀತ್ ಖುರಾನಾ ಎಂದು ಗುರುತಿಸಲಾಗಿದೆ. ಮಾಡೆಲ್ ಟೌನ್‌ನ ಕಲ್ಯಾಣ್ ವಿಹಾರ್ ಪ್ರದೇಶದಲ್ಲಿ ವ್ಯಕ್ತಿ ತನ್ನ ಸ್ವಂತ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ನಿಯಿಂದ ನಡೆಯುತ್ತಿರುವ ವಿಚ್ಛೇದನ ಪ್ರಕರಣದಿಂದ ಪುನೀತ್‌ಗೆ ತೊಂದರೆಯಾಗುತ್ತಿದೆ ಎಂದು ಪುನೀತ್ ಕುಟುಂಬದವರು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಪ್ರಕಾರ, ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಪುನೀತ್ ಕೊನೆಯದಾಗಿ ತನ್ನ ಹೆಂಡತಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದನು. ಸಂಭಾಷಣೆಯು ಅವರ ಕೆಫೆ ವ್ಯವಹಾರದ ಬಗ್ಗೆ ಆಗಿತ್ತು. ಇದರಲ್ಲಿ ಪುನೀತ್ ಮತ್ತು ಅವರ ಪತ್ನಿ ಪಾಲುದಾರರಾಗಿದ್ದಾರೆ. ಫೋನ್ ಸಂಭಾಷಣೆಯ ವೇಳೆ ಪುನೀತ್ ಪತ್ನಿ ವಿಚ್ಛೇದನದ ಪ್ರಕರಣದ ಹೊರತಾಗಿಯೂ ತನ್ನನ್ನು ವ್ಯವಹಾರದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ಪುನೀತ್ ಕುಟುಂಬ ಆರೋಪಿಸಿದೆ.

ಇಬ್ಬರೂ 2016ರಲ್ಲಿ ಮದುವೆಯಾಗಿದ್ದರು. ಇಬ್ಬರೂ ಕೊನೆಯದಾಗಿ ಫೋನ್​ನಲ್ಲಿ ಮಾತನಾಡುವಾಗ ವ್ಯಾಪಾರ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಸುದೀರ್ಘ ವಾಗ್ವಾದ ನಡೆದಿತ್ತು. ಪೊಲೀಸರು ಪುನೀತ್ ಅವರ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ವಿಷಯದಲ್ಲಿ ಅವರ ಪತ್ನಿಯನ್ನು ವಿಚಾರಣೆ ನಡೆಸಲಿದ್ದಾರೆ. ಆರೋಪದ ಮೇಲೆ ಪೊಲೀಸರು ಈ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net