ನವದೆಹಲಿ: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ಕ್ಷಣ. ಸುಂದರ ಬದುಕನ್ನು ಕಲ್ಪಿಸಿಕೊಂಡು..ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ವಧು-ವರರು ಹೊಸ ಜೀವನಕ್ಕೆ ಕಾಲಿಡುತ್ತಾರೆ. ಇಲ್ಲೊಬ್ಬ ಯುವತಿ ಸಂಭ್ರಮಿಸುತ್ತಲೇ ಹೊಸ ಬದುಕಿನ ಕನಸು ಕಾಣುತ್ತಲೇ ಕೊನೆಯುಸಿರೆಳೆದಿದ್ದಾಳೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಶ್ರೇಯಾ ಜೈನ್ (28) ಎಂದು ಗುರುತಿಸಲಾಗಿದೆ. ಈಕೆ ಎಂಬಿಎ ಮುಗಿಸಿದ್ದಾರೆ. ವರ ಲಕ್ನೋದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ದೆಹಲಿ ಮೂಲದ ಶ್ರೇಯಾ ಅವರ ಕುಟುಂಬ ಡೆಹ್ರಾಡೂನ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಐಷಾರಾಮಿ ರೆಸಾರ್ಟ್ ಅನ್ನು ಬುಕ್ ಮಾಡಿದೆ. ಮದುವೆಗೆ ಎರಡು ದಿನಗಳ ಮೊದಲು, ಶ್ರೇಯಾ ಜೈನ್ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ಗೆ ತಲುಪಿದಳು.
ವಿವಾಹದ ನಿಮಿತ್ತ ಅದ್ಧೂರಿಯಾಗಿ ಮೆಹಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ಸಂಗೀತ ಕಾರ್ಯಕ್ರಮಗಳೊಂದಿಗೆ ಮೆಹೆಂದಿ ಕಾರ್ಯಕ್ರಮ ಆರಂಭವಾಯಿತು. ಆದರೆ ಮೆಹಂದಿ ದಿನದಂದು ಡ್ಯಾನ್ಸ್ ಮಾಡುವಾಗ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಯುವತಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಹೃದಯರಕ್ತನಾಳದ ತೊಂದರೆಯಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು.
ಹೆಣ್ಣು ಮಗು ಬೇಕು ಎಂಬ ಆಸೆಗೆ 9 ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ; ಕೊನೆಗೂ ಈಕೆ ಆಸೆ ಫಲಿಸಿತು..