ನವದೆಹಲಿ: ವಿಧಾನಸಭಾ ಚುನಾವಣೆಗೆ ಮುನ್ನ(Delhi Assembly Polls 2025), ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶುಕ್ರವಾರ(ಡಿಸೆಂಬರ್ 6) ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸುವ ಮೂಲಕ ಶಹದಾರ, ಜನಕಪುರಿ, ಲಕ್ಷ್ಮಿ ನಗರ ಮತ್ತು ಇತರ ಪ್ರದೇಶಗಳಲ್ಲಿ ಸಾವಿರಾರು ಮತದಾರರ ಹೆಸರನ್ನು ತೆಗೆದುಹಾಕಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು. ಶಹದಾರ ಪ್ರದೇಶದಿಂದ 11,018 ಮತದಾರರ ಹೆಸರನ್ನು ತೆಗೆದುಹಾಕಲು ಬಿಜೆಪಿ ಅರ್ಜಿ ಸಲ್ಲಿಸಿದೆ ಎಂದು ಕೇಜ್ರಿವಾಲ್ ನಿರ್ದಿಷ್ಟವಾಗಿ ತಿಳಿಸಿದರು. ಈ ಪೈಕಿ 500 ಹೆಸರುಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಶೇ.75ರಷ್ಟು ಜನ ಇನ್ನೂ ವಾಸಿಸುತ್ತಿರುವುದು ಕಂಡು ಬಂದರೂ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದರು.
ಇದಕ್ಕೆ ಉದಾಹರಣೆ ನೀಡಿದ ಕೇಜ್ರಿವಾಲ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಹದಾರದಿಂದ ಎಎಪಿ ಸುಮಾರು 5,000 ಮತಗಳ ಹೆಚ್ಚಳದಿಂದ ಗೆದ್ದಿದ್ದರಿಂದ ಮತ್ತು ಈಗ ಈ ಪ್ರದೇಶದಲ್ಲಿ ಸುಮಾರು 11,000 ಮತದಾರರ ಹೆಸರನ್ನು ತೆಗೆದುಹಾಕಲಾಗುತ್ತಿದೆ. ಈ ತೆಗೆದುಹಾಕಲಾದ ಬಹುತೇಕ ಮತದಾರರು ಆಮ್ ಆದ್ಮಿ ಪಕ್ಷದ ಬೆಂಬಲಿಗರು ಎಂದು ಹೇಳಿದರು.
VIDEO | “BJP is filing applications in Election Commission to cancel votes of people on a large scale in Delhi. The Election Commission is taking action against these applications. In the last one month, BJP has filed around 11,000 applications to cancel votes in Shahdara… pic.twitter.com/JwuMniqpwc
— Press Trust of India (@PTI_News) December 6, 2024
ಇದೇ ವೇಳೆ ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅರ್ಜಿಗಳನ್ನು ಸಂಜೆಯೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೆ ಅರವಿಂದ್ ಕೇಜ್ರಿವಾಲ್ ವಿನಂತಿಸಿದ್ದಾರೆ. ಅಂತಹ ಕ್ರಮವು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಹಾಗೂ ಆರೋಪ ಮತ್ತು ಪ್ರತ್ಯಾರೋಪಗಳ ಪರಿಸ್ಥಿತಿಯನ್ನು ತಪ್ಪಿಸುತ್ತದೆ. 11,000 ಹೆಸರುಗಳ ಪೈಕಿ 500 ಹೆಸರುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಶೇ.75ರಷ್ಟು ಹೆಸರುಗಳನ್ನು ತಪ್ಪಾಗಿ ತೆಗೆದು ಹಾಕಿದರೆ ಅದರ ವ್ಯಾಪ್ತಿ ಏನೆಂದು ತಿಳಿಯಬಹುದು ಎಂದು ಮಾಜಿ ಸಿಎಂ ಆರೋಪಿಸಿದರು. ಆದರೆ ಇದುವರೆಗೂ ಕೇಜ್ರಿವಾಲ್ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. (ಏಜೆನ್ಸೀಸ್)
ಪಂಜಾಬಿಗಳ ಮಾನಹಾನಿ ಮಾಡುವ ಪಿತೂರಿ ಅವರದ್ದು; ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದು ಯಾರನ್ನು? | Arvind Kejriwal