

ಕುಂಬಳೆ: ಮಕ್ಕಳಿಗೆ ಷೋಡಶ ಸಂಸ್ಕಾರಗಳನ್ನು ನೀಡಬೇಕು. ಆ ಸಂಸ್ಕಾರಗಳನ್ನು ನೀಡುತ್ತಾ ಬಂದ ಹಾಗೆ ಮಗುವಿಗೂ ಒಂದು ಸಂಸ್ಕಾರ ಸಿಗುತ್ತದೆ. ಸಂಸ್ಕಾರ ಎನ್ನುವುದು ಮಗು ದಾರಿ ತಪ್ಪದೇ ಇರುವಂತಹ ಬೇಲಿ ಎಂದು ವಿಹಿಂಪ ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ್ ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಕೋಟೇಶ್ವರ ತಿಳಿಸಿದರು.
ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.
ದೇಲಂಪಾಡಿ ಗಣೇಶ ತಂತ್ರಿ ಅನುಗ್ರಹ ಭಾಷಣ ಮಾಡಿದರು. ಕ್ಷೇತ್ರ ಆಡಳಿತ ಮೊಕ್ತೇಸರ ಐ.ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಕುಸುಮೋದರ ಶೆಟ್ಟಿ, ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ರವೀಂದ್ರ ಆಳ್ವ ಕಿದೂರುಗುತ್ತು, ಸುಕುಮಾರ ಕುದ್ರೆಪಾಡಿ, ಡಾ.ಹರಿಕಿರಣ್ ಬಂಗೇರ, ಸುರೇಶ್ ಕೆ., ಕುಡಾಲುಗುತ್ತು ಗಣೇಶ್ ರೈ, ರಾಜ್‌ಮೋಹನ್ ಶೆಟ್ಟಿ ಯಡ್ತರೆ, ಡಾ.ವಿಷ್ಣು ಪ್ರಸಾದ್ ಬರೆಕೆರೆ, ಅಧಿಕಾರಿ ಮಹಾಲಿಂಗೇಶ್ವರಯ್ಯ, ಕೋಳಾರು ಸತೀಶ್ಚಂದ್ರ ಭಂಡಾರಿ, ಧರ್ಮಪಾಲ ಭಂಡಾರಿ, ವಸಂತ ಪಂಡಿತ್ ಗುಂಪೆ, ಅಶೋಕ್ ಭಂಡಾರಿ ಕುಡಾಲುಗುತ್ತು, ಉದಯ ಕುಮಾರ್ ಗಟ್ಟಿ, ಡಾ.ಹರೀಶ್ ಬೊಟ್ಟಾರಿ, ಸುಕೇಶ್ ಭಂಡಾರಿ ಕಿದೂರು, ಬಿ.ಪಿ.ಶೇಣಿ, ನಾರಾಯಣ ಮವ್ವಾರು ಉಪಸ್ಥಿತರಿದ್ದರು. ವಳಕುಂಜ ವೆಂಕಟರಮಣ ಭಟ್, ವಾಸ್ತುಶಿಲ್ಪಿ ಲಕ್ಷ್ಮೀವೆಂಕಟಕೃಷ್ಣ ಭಟ್ ಮುನಿಯಂಗಳ, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಅಡಿಗ, ರಾಧಾಕೃಷ್ಣ ಪುತ್ತೂರಾಯ ಅವರನ್ನು ಗೌರವಿಸಲಾಯಿತು. ಡಿ.ದಾಮೋದರ ಸ್ವಾಗತಿಸಿದರು. ಡಾ. ರತ್ನಾಕರ ಶೆಟ್ಟಿ ದೇಲಂಪಾಡಿ ನಿರೂಪಿಸಿದರು. ಡಿ.ರಾಜೇಂದ್ರ ರೈ ವಂದಿಸಿದರು.
ದೇವರ ಅನುಗ್ರಹದ ಫಲವನ್ನು ನೋಡಿ ಅನುಭವಿಸಲು ಸಾಧ್ಯವಾಗದು. ಅದನ್ನು ಅನುಭವಿಸಿ ಅರಿಯಬೇಕು. ನಾವು ವಿಶ್ವಾಸ, ಭಕ್ತಿಯಿಂದ ಭಗವಂತನಲ್ಲಿ ಮೊರೆಯಿಟ್ಟರೆ ದೇವರ ಅನುಗ್ರಹವಾಗುವುದು. ದೇಲಂಪಾಡಿ ಗಣೇಶ ತಂತ್ರಿ