ಕುಪ್ಪೆಪದವಿನಲ್ಲಿ ತುಪ್ಪದ ದೀಪೋತ್ಸವ

Gur_tuppa Deepa
Published on

ಗುರುಪುರ: ಮಂಗಳೂರಿನ ತುಳುವೆರೆ ತುಳು ಚಾವಡಿ, ಕುಪ್ಪೆಪದವಿನ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಮತ್ತು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಹಾಗೂ ಶ್ರೀಕೃಷ್ಣ ಭಕ್ತ ವೃಂದದ ವತಿಯಿಂದ ಕುಪ್ಪೆಪದವು ಗುರುನಗರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಕಾರ್ತಿಕ ವಾಸದ ಪ್ರಯುಕ್ತ ಶನಿವಾರ ಸಂಜೆ ವಿಶೇಷ ತುಪ್ಪದ ದೀಪೋತ್ಸವ ನಡೆಯಿತು.

ಉಡುಪಿಯಿಂದ ತರಲಾದ ಶ್ರೀಕಷ್ಣಬಲರಾಮರ ಮೂರ್ತಿಗೆ ಕುಪ್ಪೆಪದವು ಶ್ರೀ ರಾಮಕೃಷ್ಣ ಭಜನಾ ಮಂಡಳಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಶೋಭಾಯಾತ್ರೆಯಲ್ಲಿ ಸಮುದಾಯ ಭವನಕ್ಕೆ ತರಲಾಯಿತು. ಬಳಿಕ ಸಮುದಾಯ ಭವನದಲ್ಲಿ ಮೂರ್ತಿಗೆ ಪೂಜೆ ನೆರವೇರಿಸಿ, ಗೋಪೂಜೆ ನಡೆಸಲಾಯಿತು.

ಗುರುರಾಜ ಪ್ರಭು ಅವರು ಕೃಷ್ಣ ಬಲರಾಮರ ಜೀವನ ಮೌಲ್ಯಗಳ ನಾಮ ಸಂಕೀರ್ತನೆ, ಪ್ರವಚನ ನಡೆಸಿಕೊಟ್ಟರು. ತುಪ್ಪದ ದೀಪಾರಾಧನೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಉದಯ ಪ್ರಭು, ಹರಿಶ್ಚಂದ್ರ ಕೆ., ರಾಮಚಂದ್ರ ಸಾಲ್ಯಾನ್, ರು ಎಂ.ಅಗರಿ, ವಿನೋದ್ ಕುವಾರ್ ಅಂಬೊಲೊಟ್ಟು, ಸಂಜೀವ ಸಾಲ್ಯಾನ್ ಕಲ್ಪನೆ, ನಾರಾಯಣ ಎಂ.ಸುವರ್ಣ ಬನದಬಳಿ, ಸತೀಶ್ ಪೂಜಾರಿ ಬಳ್ಳಾಜೆ, ಚಂದ್ರಶೇಖರ ತುಂಬೆಮಜಲು, ಮಹಾಬಲ ಸಾಲ್ಯಾನ್, ರಾಮಚಂದ್ರ ಐನ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net