ಮುಂಬೈ: ಡ್ರಗ್ಸ್ ಕೇಸ್ಗೆ ಸಂಬಂಧಿಸಿ ವಿಚಾರಣೆ ಎದುರಿಸುವ ಸಲುವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶನಿವಾರ ಬೆಳಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಕಚೇರಿ ತಲುಪಿದ್ದಾರೆ. ದೀಪಿಕಾ ಪಡುಕೋಣೆಯವರ ಮ್ಯಾನೇಜರ್ ಕರೀಶ್ಮಾ ಪ್ರಕಾಶ್, ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿಖಾನ್ ಅವರೂ ಇಂದು ವಿಚಾರಣೆ ಎದುರಿಸಲಿದ್ದಾರೆ.
ದೀಪಿಕಾ ಅವರು ಬೆಳಗ್ಗೆ 9.45ಕ್ಕೆ ಎನ್ಸಿಬಿ ಕಚೇರಿಗೆ ಆಗಮಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ವಿಚಾರಣೆಗೆ ಹಾಜರಾಗುವಂತೆ ಮೂವರು ನಟಿಯರಿಗೆ ಎನ್ಸಿಬಿ ಬುಧವಾರವೇ ನೋಟಿಸ್ ಜಾರಿಗೊಳಿಸಿತ್ತು. ದೀಪಿಕಾ ಅವರ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ನಿನ್ನೆಯೂ ವಿಚಾರಣೆ ಎದುರಿಸಿದ್ದು, ಉಳಿದ ವಿಚಾರಣೆ ಇಂದು ಪೂರ್ಣಗೊಳ್ಳಲಿದೆ.
ಇದನ್ನೂ ಓದಿ: ಟೆರರಿಸಂ, ರಹಸ್ಯ ಪರಮಾಣು ವ್ಯಾಪಾರವಷ್ಟೇ 70 ವರ್ಷಗಳಲ್ಲಿ ಪಾಕ್ನ ಏಕೈಕ ಹೆಗ್ಗಳಿಕೆ: ವಿಶ್ವಸಂಸ್ಥೆಯಲ್ಲಿ ಭಾರತ
ಕರೀಶ್ಮಾ ಅವರ ವಾಟ್ಸ್ಆ್ಯಪ್ ಚಾಟ್ಗಳಲ್ಲಿ ಡಿ ಎಂಬ ಸಂಕೇತಾಕ್ಷರದೊಂದಿಗೆ ಡ್ರಗ್ಸ್ ಕುರಿತ ಮಾತುಕತೆ ನಡೆದಿದೆ. ಅವರು ಈ ವಿಚಾರ ಯಾರೊಂದಿಗೆ ಸಂವಹನ ನಡೆಸಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಎಲ್ಲರ ವಿಚಾರಣೆಯೊಂದಿಗೆ ಸಾಕ್ಷ್ಯಗಳನ್ನೂ ಕಲೆಹಾಕಲಾಗುತ್ತಿದೆ ಎಂದು ಎನ್ಸಿಬಿ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಭಾರತದಲ್ಲಿ ಡಾ.ಮನಮೋಹನ್ ಸಿಂಗ್ ಅವರಂಥ ಪ್ರಧಾನಿಯ ಅನುಪಸ್ಥಿತಿ ಕಾಡುತ್ತಿದೆ- ರಾಹುಲ್ ಗಾಂಧಿ