ಮಗಳ ಫೋಟೋ, ಹೆಸರು ಬಹಿರಂಗಪಡಿಸಿದ ದೀಪ್ವೀರ್: ದುವಾ ಹೆಸರಿನ ಅರ್ಥವೇನು ಗೊತ್ತಾ? Deepika Padukone

Deepika Padukone
Published on

ಮುಂಬೈ: ದೀಪಿಕಾ ಪಡುಕೋಣೆ ( Deepika Padukone ) ಮತ್ತು ರಣವೀರ್ ಸಿಂಗ್ ( Ranveer Singh ) ಬಾಲಿವುಡ್​ ಸಿನಿ ಅಭಿಮಾನಿಗಳ ನೆಚ್ಚಿನ ಜೋಡಿ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಲು ಕುತೂಹಲದಿಂದ ಕಾಯುತ್ತಾರೆ. ಇತ್ತೀಚೆಗೆ, ದೀಪಿಕಾ ಮತ್ತು ರಣವೀರ್ ತಮ್ಮ ಪುಟ್ಟ ಅತಿಥಿಯನ್ನು ಸ್ವಾಗತಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಸೆ.9ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ತಾಜಾ ಸಂಗತಿ ಏನೆಂದರೆ, ದೀಪಾವಳಿ ಆಚರಣೆಯ ಹಿನ್ನೆಯಲ್ಲಿ ದೀಪಿಕಾ ಮತ್ತು ರಣವೀರ್​ ತಮ್ಮ ಮಗುವಿನ ಹೆಸರು ಮತ್ತು ಫೋಟೋವನ್ನು ಬಹಿರಂಗಪಡಿಸಿದ್ದಾರೆ. ಮಗುವಿಗೆ 'ದುವಾ ಪಡುಕೋಣೆ ಸಿಂಗ್​' ಎಂದು ಹೆಸರಿಡಲಾಗಿದೆ. ದುವಾ ಅಂದರೆ ಪ್ರಾರ್ಥನೆ ಎಂದರ್ಥ. ಹೆಸರು ಬಹಿರಂಗಪಡಿಸುವುದರ ಜೊತೆಗೆ ಮಗುವಿನ ಸುಂದರವಾದ ಕಾಲಿನ ಫೋಟೋವನ್ನು ಸಹ ದಂಪತಿ ಹಂಚಿಕೊಂಡಿದ್ದಾರೆ.

ದುವಾ ಅಂದರೆ ಪ್ರಾರ್ಥನೆ ಎಂದರ್ಥ. ಏಕೆಂದರೆ, ನಮ್ಮ ಪ್ರಾರ್ಥನೆಗೆ ಆಕೆಯೇ ಉತ್ತರ. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಗಳಿಂದ ತುಂಬಿದೆ ಎಂದು ದೀಪಿಕಾ ಮತ್ತು ರಣವೀರ್ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಮಗಳನ್ನು ಅಭಿಮಾನಿಗಳಿಗೆ ಪರಿಚಯಿಸಿ, ಖುಷಿ ಹಂಚಿಕೊಂಡಿದ್ದಾರೆ. ದೀಪಿಕಾ, ರಣವೀರ್​ ದಂಪತಿಯ ಮಗಳ ಫೋಟೋಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಅಂದಹಾಗೆ ದೀಪಿಕಾ-ರಣವೀರ್ 2018ರಲ್ಲಿ ಇಟಲಿಯಲ್ಲಿ ಮದುವೆಯಾದರು. ಇಬ್ಬರು ಮೊದಲ ಬಾರಿಗೆ ‘ರಾಮಲೀಲಾ’ ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. 5 ವರ್ಷಗಳ ಪ್ರೀತಿಯ ನಂತರ 2018ರಲ್ಲಿ ಮದುವೆಯಾದರು. ‘ಗೋಲಿಯೋನ್ ಕಿ ರಾಸ್ಲೀಲಾ: ರಾಮಲೀಲಾ’, ‘ಪದ್ಮಾವತ್’, ‘ಬಾಜಿರಾವ್ ಮಸ್ತಾನಿಸಾ’ ಮತ್ತು ’83’ ಚಿತ್ರಗಳಲ್ಲಿ ದೀಪಿಕಾ ಮತ್ತು ರಣವೀರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net