More

    ಹೇ ಗೂಗಲ್ ನನ್ನ ವಯಸ್ಸು 31 ಅಲ್ಲಾ; ನಟಿ ದೀಪಿಕಾ ದಾಸ್​ ಹೀಗೆ ಹೇಳಿದ್ಯಾಕೆ

    ಬೆಂಗಳೂರು: ಜನಪ್ರಿಯ ನಾಗಿಣಿ ಮೂಲಕ ಮನೆ ಮಾತಾಗಿದ್ದ ನಟಿ ದೀಪಿಕಾ ದಾಸ್​ ಇಂದು (ಫೆಬ್ರವರಿ 23) ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಅವರು ಗೂಗಲ್​ಅನ್ನು ತರಾಟೆಗೆ ತೆಗೆದುಕೊಂಡಿರುವ ನಟಿ ಅದಕ್ಕೆ ಲೆಕ್ಕದ ಪಾಠ ಮಾಡಿದ್ದಾರೆ. ಈ ವಿಚಾರ ಎಲ್ಲರ ಗಮನ ಸೆಳೆದಿದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

    ನಾಗಿಣಿ, ಬಿಗ್​ಬಾಸ್​ ಸೀಸನ್​ 7 ಹಾಗೂ 9ರ ಮೂಲಕ ಮನೆ ಮಾತಾಗಿರುವ ನಟಿ ದೀಪಿಕಾ ದಾಸ್​ ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. ಬಿಳಿ ಬಣ್ಣದ ಫ್ಲೋರಲ್ ಡ್ರೆಸ್ ಧರಿಸಿ, ಒಂದು ಕೈಯಲ್ಲಿ ರೋಸ್ ಬುಕ್ಕೆ ಮತ್ತೊಂದು ಕೈಯಲ್ಲಿ ಕಪ್ ಕೇಕ್ ಹಿಡಿದು, ತಮ್ಮ ಮುದ್ದು ನಾಯಿ ಮರಿ ಜೊತೆಗೆ ಮುದ್ದಾಗಿ ಪೋಸ್ ಕೊಟ್ಟಿರುವ ದೀಪಿಕಾ ದಾಸ್ ಫೋಟೋ ಸಖತ್​ ವೈರಲ್​ ಆಗಿದೆ.

    ಇದನ್ನೂ ಓದಿ: ರಜನಿ ಫ್ಯಾನ್ಸ್​ಗೆ ಗುಡ್​ ನ್ಯೂಸ್​; ಜೈಲರ್​-2 ಕನ್ಫರ್ಮ್ ಮಾಡಿದ​​ ಖ್ಯಾತ ನಟಿ

    ತಮ್ಮ ಫೋಟೋದ ಜೊತೆಗೆ ದೀಪಿಕಾ ಕ್ಯಾಪ್ಶನ್ ಕೂಡ ಹಾಕಿದ್ದು, ಆ ಮೂಲಕ ತಮ್ಮ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ಕೊಟ್ಟ ಗೂಗಲ್ (Google) ನ ಕಿವಿ ಹಿಂಡಿದ್ದಾರೆ. ಗೂಗಲ್ ನಲ್ಲಿ ದೀಪಿಕಾ ಹುಟ್ಟು ಹಬ್ಬದ ದಿನಾಂಕ 23 ಫೆಬ್ರುವರಿ 1993 ಅಂದ್ರೆ ಈಗ 31 ವರ್ಷ ಅಂತ ಇದೆ. ಹೇ ಗೂಗಲ್ ನನಗೆ 31 ವರ್ಷ ಆಯ್ತು ಅಂತ ಹೇಳೋದನ್ನು ನಿಲ್ಸು. ನನಗೀಗ ಅಧಿಕೃತವಾಗಿ 28 ವರ್ಷ ವಯಸ್ಸಾಗಿದೆ ಅಷ್ಟೇ (ಆದರೂ 82ರಂತೆ ಫೀಲ್ ಆಗ್ತಿದೆ). ಥ್ಯಾಂಕ್ಸ್ ಯುನಿವರ್ಸ್,  ನನ್ನ ಜೀವನದಲ್ಲಿ ಆಗಿರುವ ಎಲ್ಲಾ ವಿಷಯಕ್ಕೂ ಥ್ಯಾಂಕ್ಸ್  ಎಂದು ಹೇಳುತ್ತಾ, ನನಗೆ ನಾನೇ ಮೊದಲಿಗೆ ವಿಶ್ ಮಾಡ್ತೀನಿ ಎಂದು ಹ್ಯಾಪಿ ಬರ್ತ್ ಡೇ ಮೈ ಸೆಲ್ಪ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಇತ್ತ ನಟಿಯ ಪೋಸ್ಟ್​ಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ನೀವು 28 ಅಲ್ಲ 18 ವರ್ಷದವರಂತೆ ಕಾಣುತ್ತಿದ್ದೀರಾ ಎಂದು ಕಮೆಂಟ್ ಮಾಡುವ ಮೂಲಕ ನೆಚ್ಚಿನ ನಟಿಗೆ ಶುಭ ಹಾರೈಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts