

ಕಡಬ: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಬಿಜೆಪಿ ಅಲಂಕಾರು ಶಕ್ತಿಕೇಂದ್ರದ ವತಿಯಿಂದ ಆಚರಿಸಲಾಯಿತು. ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಮಂಡಲಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಮಾತನಾಡಿದರು.
ಹಿರಿಯರಾದ ಈಶ್ವರ ಭಟ್, ಅಲಂಕಾರು ಶಕ್ತಿ ಕೇಂದ್ರ ಪ್ರಮುಖ್ ಜಯಕರ ಪೂಜಾರಿ, ಬೂತ್ ಸಮಿತಿ ಅಧ್ಯಕ್ಷ ಶೀನಪ್ಪ ಕುಂಬಾರ, ಕೊಲ ಬೂತ್ ಸಮಿತಿ ಅಧ್ಯಕ್ಷ ವಸಂತ ಕುಮಾರ್, ಅಲಂಕಾರು ಗ್ರಾಮದ ಅಧ್ಯಕ್ಷೆ ಸುಶೀಲ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷ ದಾಮೋದರ್ ಕಕ್ವೆ, ಅಲಂಕಾರು ಸಿ.ಎ.ಬ್ಯಾಂಕ್ ನಿರ್ದೇಶಕ ಸುಧಾಕರ, ಮಂಡಲ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ ಆಚಾರ್ಯ, ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಆರ್.ದಿವಾಕರ ಕುಂಬಾರ, ಮುಖಂಡರಾದ ದಯಾನಂದ ಆಲಡ್ಕ, ಶಾರದಾ, ಶ್ವೇತ ಕುಮಾರ್, ಶ್ರೀರಾಮ್ ಕೊಯಿಲ, ದೇವಿಪ್ರಸಾದ್, ಸುರೇಶ, ಅರವಿಂದ, ಪುರುಷೋತ್ತಮ ಮತಿತ್ತರರು ಉಪಸ್ಥಿತರಿದ್ದರು.