ಭರತೇಶ್ ಅಲಸಂಡೆಮಜಲು ವಿಕಿಮೀಡಿಯ ಸಮ್ಮೇಳನಕ್ಕೆ ಆಯ್ಕೆ

Sul_Bharatesh
Published on

ಸುಳ್ಯ: ಪೆರ್ಲಂಪಾಡಿ ನಿವಾಸಿ ಭರತೇಶ ಅಲಸಂಡೆಮಜಲು ಹೈದ್ರಾಬಾದ್‌ನಲ್ಲಿ ನಡೆಯುವ ಮೂರನೇ ವಿಕಿಮೀಡಿಯ ಟೆಕ್ನಾಲಜಿ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ. ಇದು ವಿಕಿಮೀಡಿಯ ಫೌಂಡೇಷನ್, ಮೀಡಿಯಾ ವಿಕಿ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಹಯೋಗದಲ್ಲಿ ನಡೆಯಲಿದೆ.

ಮಂಗಳೂರು ಕರಾವಳಿ ವಿಕಿಮೀಡಿಯನ್ಸ್ ಯೂಸರ್ಸ್ ಗ್ರೂಪ್ ಸಕ್ರಿಯ ಸದಸ್ಯರಾಗಿದ್ದು, ತುಳು ವಿಕಿಪೀಡಿಯಾದ ನಿರ್ವಾಹಕರಾಗಿದ್ದಾರೆ. ಇತ್ತೀಚೆಗೆ ಜರ್ಮನಿಯಲ್ಲಿ ಜರುಗಿದ ವಿಕಿ ಸಮಿಟ್‌ನಲ್ಲಿ ತುಳು ಭಾಷೆಯನ್ನು ಪ್ರತಿಸಿಧಿಸಿದ್ದರು. ತುಳು ಮತ್ತು ಕನ್ನಡ ಬರಹಗಾರರಾಗಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ. ಪ್ರಸ್ತುತ ಬ್ಯಾಂಕ್ ಆಫ್ ಬರೋಡ ಉದ್ಯೋಗಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net