

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಸಂರಕ್ಷಣಾ ವೇದಿಕೆ ಸಮಿತಿ ರಚನೆ ಕಾರ್ಯಕ್ರಮ ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.
ಹಿರಿಯರಾದ ಶಿವಣ್ಣ ಕೊಡಿಂಬಾಳ ಉದ್ಘಾಟಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 22 ವರ್ಷಗಳಿಂದ ಪ್ರಗತಿಬಂಧು ಸ್ವಸಹಾಯ ಸಂಘಗಳ ರಚನೆ ಮೂಲಕ ಸಮುದಾಯದ ಅಭಿವದ್ಧಿಗೆ ಸಹಕರಿಸಿದೆ ಎಂದರು. ಬಿಳಿನೆಲೆ ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಣ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯ ಸಂರಕ್ಷಣಾ ವೇದಿಕೆಯ ವಿವಿಧ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಲೋಕನಾಥ ಎಂ.ಕೈಕಂಬ, ಉಪಾಧ್ಯಕ್ಷರಾಗಿ ಉಷಾ ಸತೀಶ್ ಬಿಳಿನೆಲೆ, ಗೋಪಾಲಕೃಷ್ಣ ನೆಕ್ಕಿಲಾಡಿ, ಕಾರ್ಯದರ್ಶಿಯಾಗಿ ವಿನೋದ್ ಕೊಂಬಾರು, ಜತೆ ಕಾರ್ಯದರ್ಶಿಯಾಗಿ ಲೋಕೇಶ್ವರಿ ಸಿರಿಬಾಗಿಲು, ಕೋಶಾಧಿಕಾರಿಯಾಗಿ ವೀಣಾ ಭಟ್ ಕೊಣಾಜೆ ಆಯ್ಕೆಗೊಂಡರು.
ಕೋಣಾಜೆ ಸೇವಾಪ್ರತಿನಿಧಿ ಬೇಬಿ ಸ್ವಾಗತಿಸಿದರು. ಕೆಂಜಾಲ ಸೇವಾ ಪ್ರತಿನಿಧಿ ಗಣೇಶ್ ವಂದಿಸಿದರು. ಬಿಳಿನೆಲೆ ಸೇವಾಪ್ರತಿನಿಧಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.