

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯಿತಿ ಬಿಜೆಪಿ ಸಮಿತಿ ವತಿಯಿಂದ ಬುಧವಾರ ಪಂಡಿತ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆ ಕುಂಬಳೆಯ ಪಕ್ಷದ ಕಚೇರಿಯಲ್ಲಿ ನಡೆಯಿತು.
ಬಿಜೆಪಿ ಕೇರಳ ರಾಜ್ಯ ಕೌನ್ಸಿಲ್ ಸದಸ್ಯ ವಿ.ರವೀಂದ್ರನ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಿಜೆಪಿ ಕುಂಬಳೆ ಟಕದ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ಎಸ್., ಮಂಡಲ ಕಾರ್ಯದರ್ಶಿ ಕೆ.ಸುಧಾಕರ ಕಾಮತ್, ಯುವಮೋರ್ಚಾ ಕುಂಬಳೆ ಪಂಚಾಯಿತಿ ಅಧ್ಯಕ್ಷ ಅಜಿತ್ ಕುವಾರ್, ಗ್ರಾಪಂ ಸದಸ್ಯ ಅಜಯ್ ಎಂ, ಹಿರಿಯರಾದ ವೇಣುಗೋಪಾಲ್, ಶಶಿ ಕುಂಬಳೆ, ಗೋಪಾಲಕೃಷ್ಣ ಕಂಚಿಕಟ್ಟೆ, ಪ್ರಶಾಂತ್ ಪಿ.ಎಚ್. ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯೆ ಪ್ರೇವಾವತಿ ಕುಂಬಳೆ ಸ್ವಾಗತಿಸಿದರು. ಮೋಹನ ಬಂಬ್ರಾಣ ವಂದಿಸಿದರು.