ಬಸವೇಶ್ವರ ದೇವಳದಲ್ಲಿ ನವಾನ್ನ ಸಮರ್ಪಣೆ

Sub_Koral-Habba
Published on

ಸುಬ್ರಹ್ಮಣ್ಯ: ಕುಲ್ಕುಂದ ಬಸವನಮೂಲೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನವಾನ್ನ ಸಮರ್ಪಣೆ, ತೆನೆ ವಿತರಣಾ ಕಾರ್ಯಕ್ರಮ ಭಾನುವಾರ ನೆರವೇರಿತು.

ಈ ಪ್ರಯುಕ್ತ ಮುಂಜಾನೆ ಗಣಪತಿ ಹೋಮ ನೆರವೇರಿತು. ಬಳಿಕ ತೆನೆಯನ್ನು ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ತರಲಾಯಿತು.ನಂತರ ತೆನೆಪೂಜೆ ನಡೆದು, ಶ್ರೀ ದೇವಳದ ಆಡಳಿತ ಮಂಡಳಿಗೆ, ಭಕ್ತರಿಗೆ ತೆನೆ ವಿತರಿಸಲಾಯಿತು. ದೇವಳದ ಪ್ರಧಾನ ಅರ್ಚಕ ಗಣೇಶ್ ದೀಕ್ಷಿತ್ ವೈದಿಕ ವಿಧಿ-ವಿಧಾನ ನೆರವೇರಿಸಿದರು.

ಮದ್ಯಾಹ್ನ ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪಂಚಾಮೃತ ಮಹಾಭಿಷೇಕ ಸಹಿತ ರುದ್ರಾಭಿಷೇಕ ನೆರವೇರಿತು. ಬೆಳಗ್ಗೆ ಸಾರ್ವಜನಿಕ ಗಣಪತಿ ಹೋಮ, ಮಧ್ಯಾಹ್ನ ಶನೀಶ್ವರದೇವರ ಪೂಜೆ, ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ಮಹಾ ಪೂಜೆ, ಗೋಗ್ರಾಸ ಸಮರ್ಪಣೆ, ಮಕ್ಕಳಿಗೆ ಅನ್ನಪ್ರಶಾನ ನೆರವೇರಿತು. ಬಳಿಕ ನವಾನ್ನ ಪ್ರಸಾದ ವಿತರಣೆ ನಡೆಯಿತು. ಸಂಜೆ ಶ್ರೀ ದುರ್ಗಾದೇವಿ ಪೂಜೆ ನೆರವೇರಿತು. ಶ್ರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂಧ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net