

ಕಟೀಲು: ಬಿಲ್ಲವ ಸವಾಜ ಸೇವಾ ಸಂದ ನೂತನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಲೋಕಾರ್ಪಣೆ ಬುಧವಾರ ನಡೆಯಿತು.
ಮನೋಜ್ ತಂತ್ರಿ ಉಪಸ್ಥಿತಿಯಲ್ಲಿ ಮಹೇಶ್ ಶಾಂತಿ ಹೆಜವಾಡಿ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿಗಳು ನಡೆಯಿತು.ನೂತನ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯ ಪ್ರತಿಷ್ಠಾಪನೆ ನಡೆದು ಕುಂಭಾಭಿಷೇಕ ಜರಗಿತು.ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು.
ಬಿಲ್ಲವ ಸವಾಜ ಸೇವಾ ಸಂ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಲೋಕಾರ್ಪಣೆ ಬಿಂಬ ಪ್ರತಿಷ್ಠಾಪನಾ ಸಮಿತಿಗಳ ಅಧ್ಯಕ್ಷರು, ಗೌರವಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು, ಕಟೀಲು, ನಡುಗೋಡು, ಮೆನ್ನಬೆಟ್ಟು, ಕಿಲೆಂಜೂರು ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.