ಶಾಲೆಗೆ ಹಳೇ ವಿದ್ಯಾರ್ಥಿಗಳ ಕೊಡುಗೆ ಸ್ತುತ್ಯರ್ಹ

Mul_Contribution
Published on

ಮೂಲ್ಕಿ: ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾದ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಹಳೇ ವಿದ್ಯಾರ್ಥಿ ಸಂಘಟನೆಗಳ ಪಾತ್ರ ಹೆಚ್ಚಾಗಿದ್ದು, ಶಾಲೆ ನೀಡಲಾದ ಕೊಡುಗೆಗಳು ಅಭಿನಂದನೀಯ ಎಂದು ಉದ್ಯಮಿ ವಾಸು ಪೂಜಾರಿ ಹೇಳಿದರು.

ಕೆಪಿಎಸ್‌ಕೆ ಶ್ರೀ ಗಣಪತಿ ಶೆಣೈ ಕಲಾಮಂದಿರದ ವೇದಿಕೆಯಲ್ಲಿ ನಡೆದ ಅತಿಕಾರಿಬೆಟ್ಟು ಕೊಲಕಾಡಿ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಮೆರಿಕನ್ ಲೈಬ್ರೇರಿಯ ನಿವೃತ್ತ ಗ್ರಂಥಪಾಲಕ ಶಶಿಧರ್ ಶೆಟ್ಟಿ ಪಂಜಿನಡ್ಕ, ಉದ್ಯಮಿ ಸಂತೋಷ್ ಶೆಟ್ಟಿ ಪರಂಕಿಲ, ಮುಂಬೈ ಉದ್ಯಮಿ ಪ್ರಮೋದ್ ಆಳ್ವ, ಉಡುಪಿ ಸ.ಪ.ಪೂ. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಛಾಯಾ ಶೆಟ್ಟಿ, ಕೊಂಕಣ ರೈಲ್ವೆ ಟಿಟಿಇ ಗಿರೀಶ್ ಎ.ಜಿ., ಶಾಲಾ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ನಿತಿನ್ ಶೆಟ್ಟಿ, ಪದಾಧಿಕಾರಿಗಳಾದ ಗಂಗಾಧರ ಶೆಟ್ಟಿ, ರಂಗನಾಥ ಶೆಟ್ಟಿ, ಕೊಲಕಾಡಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಅಂಬರೀಶ್ ಲಮಾಣಿ, ನಿವೃತ್ತ ಮುಖ್ಯಶಿಕ್ಷಕ ನಾಗಭೂಷಣ್ ರಾವ್, ಶಿಕ್ಷಕ ವೆಂಕಟರಮಣ ಕಾಮತ್ ಪಲಿಮಾರು, ನಿತಿನ್, ಪ್ರಕಾಶ್ ಸುಜನಾ ಶೆಟ್ಟಿ ಉಪಸ್ಥಿತರಿದ್ದರು.

26 ವರ್ಷಗಳಿಂದ ಹಿಂದಿ ಶಿಕ್ಷಕರಾಗಿ, ಕೆಪಿಎಸ್‌ಕೆ ಪ್ರೌಢಶಾಲೆ ಮುಖ್ಯಶಿಕ್ಷಕರಾಗಿ ನಿವೃತ್ತಿಗೊಂಡ ಚಂದ್ರಶೇಖರ್ ರಾಥೋಡ್ ಅವರನ್ನು ಗೌರವಿಸಲಾಯಿತು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಹಸ್ತ, ಶೈಕ್ಷಣಿಕ ಸಾಧಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದೀಪಿಕಾ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net