

ಕೋಟ: ಕೋಟ ಹಾಡಿಕೆರೆ ಶ್ರೀ ಶನೀಶ್ವರ ಕನಿಕಾ ದುರ್ಗಾಪರಮೇಶ್ವರಿ ದೇಗುಲ ವಾರ್ಷಿಕ ವರ್ಧಂತ್ಯುತ್ಸವ, ನೂತನ ಸಭಾಭವನ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆ ಗುರುವಾರ ನಡೆಯಿತು.
ಕೋಟ ಹಂದೆ ಶ್ರೀ ಮಹಾಗಣಪತಿ ವಿಷ್ಣುಮೂರ್ತಿ ದೇಗುಲದಿಂದ ಹೊರಟ ಹಸಿರು ಹೊರೆಕಾಣಿಕೆ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಟ ಶನೀಶ್ವರ ದೇಗುಲ ತಲುಪಿತು. ವಿವಿಧ ಭಾಗಗಳಿಂದ ಆಗಮಿಸಿದ ಕುಣಿತ ಭಜನಾ ತಂಡಗಳು, ತಟ್ಟಿರಾಯ, ಚೆಂಡೆವಾದನ ವಾದ್ಯಗಳಿದ್ದವು. ಕಳಶ ಹೊತ್ತ ಮಹಿಳಾ ಭಕ್ತರು ದೇಗುಲದಲ್ಲಿ ಪೂಜಾ ಕಾರ್ಯ ನೆರವೇರಿಸಿದರು.
ದೇಗುಲ ಪ್ರಧಾನ ಮೊಕ್ತೇಸರ ಭಾಸ್ಕರ್ ಸ್ವಾಮಿ, ಉತ್ಸವ ಸಮಿತಿ ಪ್ರಮುಖರಾದ ದಿನೇಶ್ ಗಾಣಿಗ ಕೋಟ, ಪ್ರವೀಣ್ ಕುಂದರ್, ಕೋಟ ಗ್ರಾಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಶೇಖರ್ ಜಿ., ಸುಧಾ ಎ.ಪೂಜಾರಿ, ಅಜಿತ್ ದೇವಾಡಿಗ, ಪ್ರಧಾನ ಅರ್ಚಕ ಜಯರಾಜ್ ಸಾಲಿಯಾನ್, ವ್ಯವಸ್ಥಾಪಕ ಮಂಜುನಾಥ, ಹಂಗಳೂರು ಶನೀಶ್ವರ ದೇಗುಲ ಮುಖ್ಯಸ್ಥ ಅಣ್ಣಯ್ಯ ಪೂಜಾರಿ, ಸಮಿತಿ ಪ್ರಮುಖರಾದ ಶ್ರೀಕಾಂತ್ ಪೂಜಾರಿ, ತಿಮ್ಮ ಕಾಂಚನ್, ರಾಮಣ್ಣ ಗುಳ್ಳಾಡಿ, ಸಂತೋಷ್ ಕೋಟ, ರೇಣುಕಾ ಪಾಂಡೇಶ್ವರ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಚಾಲಕಿ ಸುಜಾತಾ ಬಾಯರಿ, ಹಂದಟ್ಟು ಮಹಿಳಾ ಬಳಗದ ಪುಷ್ಪಾ ಹಂದಟ್ಟು ಮತ್ತಿತರರು ಉಪಸ್ಥಿತರಿದ್ದರು.