'ಸಾಕುತಂದೆ ರೂಮಿ' ಕೃತಿಗೆ ಅಂಬಾತನಯ ಮುದ್ರಾಡಿ ಪ್ರಶಸ್ತಿ

Award Lead
Published on

ಡಾ. ತಲ್ಲೂರು ಶಿವರಾಮ್​ ಶೆಟ್ಟಿ ಮಾಹಿತಿ

ಮಾ.27ರಂದು ಪುರಸ್ಕಾರ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಆದರ್ಶ ಅಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ. ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿ ಅವರ ಸ್ಮರಣಾರ್ಥ ನೀಡುವ ಸಂಸ್ಮರಣಾ ಪ್ರಶಸ್ತಿಗೆ ಬೆಂಗಳೂರಿನ ಉಪನ್ಯಾಸಕ ಎನ್​.ಸಿ. ಮಹೇಶ್​ ಅವರ ಸಾಕುತಂದೆ ರೂಮಿ ನಾಟಕ ಕೃತಿ ಆಯ್ಕೆಯಾಗಿದೆ.

Award-2
ಎನ್​.ಸಿ. ಮಹೇಶ್

ಪ್ರಶಸ್ತಿ ಪ್ರದಾನ ಸಮಾರಂಭವು ವಿಶ್ವರಂಗಭೂಮಿ ದಿನವಾದ ಮಾ.27ರಂದು ರಂಗಭೂಮಿ (ರಿ.) ಉಡುಪಿ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್​ ಸಹಯೋಗದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಮೂವರು ತೀರ್ಪುಗಾರರ ಸಮಿತಿಯ ಸಲಹೆಯಂತೆ ಈ ಕೃತಿ ಆಯ್ಕೆ ಮಾಡಲಾಗಿದೆ ಎಂದು ರಂಗಭೂಮಿ (ರಿ.) ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್​ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಟಕೇತರ ಸಾಹಿತ್ಯ ಕೃತಿ ಪರಿಗಣನೆ

Dr.Tallur
ಡಾ. ತಲ್ಲೂರು ಶಿವರಾಮ್​ ಶೆಟ್ಟಿ

ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ಕಳೆದ ಎರಡು ವರ್ಷದಲ್ಲಿ ಪ್ರಕಟವಾದ ಕನ್ನಡ ನಾಟಕ ಕೃತಿಗೆ ನೀಡಲಾಗುವ ದ್ವಿತೀಯ ವರ್ಷದ ಪುರಸ್ಕಾರ ಇದಾಗಿದ್ದು ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು 15 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ. ಕಳೆದ ವರ್ಷ ಈ ಪ್ರಶಸ್ತಿಯು ರಂಗಭೂಮಿಗೆ ಪ್ರಸ್ತುತವಾದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯ ಕೃತಿಯಾದ ಮೌನೇಶ್​ ಬಡಿಗೇರ ಅವರ ಅಭಿನಯ ಕಲಿಸಲು ಸಾಧ್ಯವಿಲ್ಲ ಎಂಬ ಪುಸ್ತಕಕ್ಕೆ ಲಭಿಸಿತ್ತು. ಅಂಬಾತನಯ ಮುದ್ರಾಡಿ ಅವರ ಸಂಸ್ಮರಣೆಯಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್​ನ ಸಹಯೋಗದಲ್ಲಿ ರಂಗಭೂಮಿಯು ನಿರಂತರವಾಗಿ ನಾಟಕ ಸ್ಪರ್ಧೆ ನಡೆಸುತ್ತಲಿದೆ. ಮುಂದಿನ ವರ್ಷದ ಪುರಸ್ಕಾರಕ್ಕೆ 2023 ಮತ್ತು 2024ರ ಈ ಎರಡು ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಹಾಗೂ ರಂಗಭೂಮಿಗೆ ಪ್ರಸ್ತುತವಾಗಿ ಗಂಭೀರ ಚಿಂತನೆಯುಳ್ಳ ನಾಟಕೇತರ ಸ್ವತಂತ್ರ ಸಾಹಿತ್ಯ ಕೃತಿಯನ್ನು ಪರಿಗಣಿಸಲಾಗುವುದು ಎಂದು ಡಾ. ತಲ್ಲೂರು ಶಿವರಾಮ್​ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net