ಅಶಕ್ತರಿಗೆ ಸಹಕಾರದಿಂದ ದೇವರ ಅನುಗ್ರಹ

pakashale
ಕಾರ್ಕಳ ಸುರಕ್ಷಾ ಸೇವಾಶ್ರಮಕ್ಕೆ ಸುಸಜ್ಜಿತವಾಗಿ ನಿರ್ಮಿಸಲಾದ ಪಾಕಶಾಲೆಯನ್ನು ಕೇಮಾರು ಸಾಂದಿಪಾನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು
Published on

ಕಾರ್ಕಳ: ದೇವರಿಗೆ ಕೊಟ್ಟ ನೈವೇದ್ಯ ದೇವರಿಗೆ ತಲುಪುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಬಡವರಿಗೆ ಕೊಟ್ಟ ಸಹಾಯ ದೇವರಿಗೆ ತಲುಪುತ್ತದೆ ಎಂದು ಕೇಮಾರು ಸಾಂದಿಪಾನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಕಾರ್ಕಳ ಸುರಕ್ಷಾ ಸೇವಾಶ್ರಮಕ್ಕೆ ಸುಸಜ್ಜಿತವಾಗಿ ನಿರ್ಮಿಸಲಾದ ಪಾಕಶಾಲೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ದೇವರು ಇರುವಾಗ ಯಾರೂ ಅನಾಥರಲ್ಲ, ನಾವು ಬಂದದ್ದು ಒಬ್ಬರೇ ಹೋಗುವುದು ಒಬ್ಬರೇ. ಭೂಮಿಗೆ ಬಂದಿರುವಾಗ ಯಾರು ನಮ್ಮೊಂದಿಗೆ ಇದ್ದಾರೆ ಎನ್ನುವುದು ಮುಖ್ಯವಲ್ಲ ದೇವರೊಂದಿಗೆ ನಾವಿದ್ದೇವೆ ಎಂಬುದು ಮುಖ್ಯ ಎಂದರು.

ಸಂಸ್ಥೆಯ ಸ್ಥಾಪಕ ವಿಶ್ವನಾಥ್ ಶೆಟ್ಟಿ ದುಬೈ ಗಮ್ಮತ್ ಕಲಾವಿದೆರ್ ಯುಎಇ ಇದರ ಕುರಿತು ವಿವರಿಸಿದರು. ಅರುಣ್ ಶೆಟ್ಟಿ ಮಂಗಳೂರು, ಸತೀಶ್ ಹೆಗ್ಡೆ ದುಬೈ, ಆಯಿಷಾ ಬಾನು, ಅಮ್ಮನ ನೆರವು ಟ್ರಸ್ಟ್ ಅವಿನಾಶ್ ಜಿ.ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net